ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣೆ ಬಿಜೆಪಿಯ ಶಕ್ತಿಯನ್ನು ಕೇರಳದಲ್ಲಿ ಅನಾವರಣ ಮಾಡಲಿದೆ. ಕಾಂಗ್ರೆಸ್ ಇಂದು ಮುಸ್ಲಿಂ ಜಿಹಾದಿಗಳ ಹಿಡಿತದಲ್ಲಿದೆ. ಪಿಣರಾಯಿ ಸರ್ಕಾರ ಶಬರಿಮಲೆ ಅಯ್ಯಪ್ಪ ಸನ್ನಿಧಿಯನ್ನೇ ದೋಚಿ ಭಕ್ತರಿಗೆ ದ್ರೋಹವೆಸಗಿದೆ. ಸ್ಥಳೀಯ ಅಭಿವೃದ್ಧಿಗೆ ಪಿಣರಾಯಿ ಸರ್ಕಾರ ಹಿಂದೇಟು ಹಾಕುತ್ತಿದೆ. ಚುನಾವಣೆ ಸಂದರ್ಭದಲ್ಲಿ ಪಂಚಾಯತಿ ಹಾಗೂ ಬ್ಲಾಕ್ ಪಂಚಾಯತಿಗಳ ಅಧಿಕಾರಿಗಳನ್ನು ಬದಲಾಯಿಸಿ ಸ್ಥಳೀಯಾಡಳಿತದಲ್ಲಿ ತ್ವರಿತ ಆಗಬೇಕಾದರೆ ಕಾಮಗಾರಿ, ಕೆಲಸಗಳನ್ನು ಉದ್ದೇಶಪೂರ್ವಕ ತಡೆ ಹಿಡಿಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲ ಕುಟ್ಟಿ ಹೇಳಿದರು.
ಭಾನುವಾರ ಪ್ರಧಾನಿಗಳ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರದ ಅಂಗವಾಗಿ ಮಂಜೇಶ್ವರ ಪಂಚಾಯತಿ ಕುಂಜತ್ತೂರಲ್ಲಿ ವೀಕ್ಷಿಸಿ ಕಾರ್ಯಕರ್ತರನ್ನು ಉದ್ದೇಶೀಶಿಸಿ ಅವರು ಮಾತನಾಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಮುಖಂಡರಾದ ಹರಿಶ್ಚಂದ್ರ ಎಂ, ಯಾದವ ಬಡಾಜೆ, ರಾಜೇಶ್ ಮಜಲು, ಗೋಪಾಲ್ ಶೆಟ್ಟಿ ಅರಿಬೈಲು, ರಾಕೇಶ್ ಕೆ.ಪಿ, ಮೊದಲಾದವರು ನೇತೃತ್ವ ನೀಡಿದರು. ಲತೀಶ್ ಕುಚ್ಚಿಕಾಡ್ ಸ್ವಾಗತಿಸಿ, ವಂದಿಸಿದರು.




.jpg)
.jpg)
