ಕುಂಬಳೆ: ಈ ವರ್ಷದ ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತ ಮೇಳ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಅ.21 ಮಂಗಳವಾರ(ನಾಳೆ) ಪೂರ್ವಾಹ್ನ 9 ರಿಂದ ಆರಂಭವಾಗಲಿದೆ. ಕುಂಬಳೆ ಉಪಜಿಲ್ಲಾ ವ್ಯಾಪ್ತಿಯ 60 ಕ್ಕಿಂತಲೂ ಹೆಚ್ಚು ಶಾಲೆಗಳ 850 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು 100 ಕ್ಕಿಂತಲೂ ಹೆಚ್ಚು ಶಿಕ್ಷಕರು ಭಾಗವಹಿಸುವ ಕಾರ್ಯಕ್ರಮ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಉದ್ಘಾಟಿಸುವರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ ಸುಬ್ಬಣ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂಚಾಯತಿ ಸದಸ್ಯೆ ಚಂದ್ರಾವತಿ ಎಂ ಮುಖ್ಯ ಅತಿಥಿಗಳಾಗಿರುವರು. ಪುತ್ತಿಗೆ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಜಯಂತಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್, ಪಾಲಾಕ್ಷ ರೈ, ಅನಿತ, ಪಂಚಾಯತ್ ಸದಸ್ಯರಾದ ಅನಿತಾಶಿ,್ರ ಆಸಿಫ್ ಅಲಿ, ಗಂಗಾಧರ, ಜನಾರ್ಧನ ಪೂಜಾರಿ, ಜಯಂತಿ, ಕಾವ್ಯಶ್ರೀ ಬಿ ಕೆ, ಕೇಶವ ಎಸ್ ಆರ್, ಪ್ರೇಮ ಪಿ, ಶಾಂತಿ ವೈ , ಕುಂಬಳೆ ಎಚ್ ಎಂ ಫಾರಂ ಕಾರ್ಯದರ್ಶಿ ಸುರೇಂದ್ರನ್, ಪಿಟಿಎ ಅಧ್ಯಕ್ಷ ಮೊಯಿದು ಸೀತಾಂಗೋಳಿ, ಉಪಾಧ್ಯಕ್ಷ ರಮೇಶ್ ಮುಕಾರಿಕಂಡ, ಮಾತೃಸಂಘದ ಅಧ್ಯಕ್ಷೆ ರಾಜಿ ರಾಜೇಶ್, ಎಸ್ ಎಂ ಸಿ ಅಧ್ಯಕ್ಷ ಜಾನ್ ಡಿಸೋಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುಜಂಗಾವು, ನೌಕರ ಸಂಘದ ಕಾರ್ಯದರ್ಶಿ ಕಿರಣ್ ಕೆ, ಹಿರಿಯ ಶಿಕ್ಷಕಿ ದೇವಿಕರಾಣಿ ಕೆ ಎಸ್ ಭಾಗವಹಿಸುವರು. ಮುಖ್ಯೋಪಾಧ್ಯಾಯಿನಿ ಸುನೀತ ಎ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಗಣಿತ ಕ್ಲಬ್ ಕಾರ್ಯದರ್ಶಿ ರಾಧಾಕೃಷ್ಣ ವಂದಿಸುವರು.



