ಕಾಸರಗೋಡು: ಯಕ್ಷಗಾನವನ್ನು ಅಭ್ಯಾಸ ಮಾಡುವ ಮೂಲಕ ನಮ್ಮ ಪುರಾಣಗಳನ್ನು ಅರ್ಥ ಮಾಡಬಹುದು. ರಾಗ ತಾಳ ಲಯಗಳನ್ನು ಕಲಿತುಕೊಳ್ಳುವ ಮೂಲಕ ನಮ್ಮ ಸನಾತನ ಸಂಸೃತಿಯನ್ನು ತಿಳಿದುಕೊಳ್ಳಬಹುದು. ಅದನ್ನು ಶ್ರೀಸ್ಕಂದ ಯಕ್ಷಗಾನ ಕೇಂದ್ರ, ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮುಟ್ಟತ್ತೋಡಿ ಕೃಷ್ಣಪ್ರಸಾದ ಅಡಿಗ ಅಭಿಪ್ರಾಯಪಟ್ಟರು.
ಅವರು ಕೋಡ್ಲು ಸ್ಕಂದ ಯಕ್ಷಗಾನಕೇಂದ್ರದ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶೇಣಿ ವೇಣುಗೋಪಾಲ ಅವರು ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಮೊದಲವರ್ಷದ ಸಾಧನೆಯನ್ನು ಕೊಂಡಾಡಿದರು. ಕೇಂದ್ರ ಪ್ರಥಮ ವರ್ಷದಲ್ಲಿ ಐದು ಕಾರ್ಯಕ್ರಮಗಳನ್ನು ಯಕ್ಷಗಾನದ ವಿಶ್ವವಿದ್ಯಾಲಯ ಎನಿಸಿದ ಕೂಡ್ಲು, ಮಧೂರು, ಎಡನೀರು ನಂತಹ ಕಡೆಗಳಲ್ಲಿ ನೀಡಿದ್ದು ಮಕ್ಕಳ ಭಾಗ್ಯವೇ ಸರಿ ಎಂದು ಅಭಿಪ್ರಾಯ ಪಟ್ಟರು.
ಕೂಡ್ಲು ಕುತ್ಯಾಳ ಶ್ರೀಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಆಧ್ಯಕ್ಷ ಚಂದ್ರಮೋಹನ, ನಾಟ್ಯಗುರುಗಳಾದ ರಂಜಿತ್ ಗೋಳಿಯಡ್ಕ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ವಹಿಸಿದ್ದರು. ಈ ಸಂದರ್ಭದಲ್ಲಿ ಕೂಡ್ಲಿನ ಹಿರಿಯ ಯಕ್ಷಗಾನ ಕಲಾವಿದ ಪುರುಷೋತ್ತಮ ಆಚಾರ್ಯ ಇವರಿಗೆ ಶಾಲು, ಹಾರ ಸ್ಮರಣಿಕೆ ಫಲಪುಷ್ಪನೀಡಿ ಗೌರವಿಸಲಾಯಿತು. ಕೇಂದ್ರದ ಕಾರ್ಯದರ್ಶಿ ಕಿರಣ್ ಕುಮಾರ್ ಪಾಯಿಚಾಲು ಸ್ವಾಗತಿಸಿ, ಸಂಚಾಲಕ ಮುರಳೀಧರ ಶೆಟ್ಟಿ ವಂದಿಸಿದರು. ಬಳಿಕ ಕೇಂದ್ರದ ಮಕ್ಕಳಿಂದ ಸುದರ್ಶನವಿಜಯ, ಹಾಗು ಊರಕಲಾವಿದರಿಂದ ಕುಂಭಕರ್ಣ ಕಾಳಗ ಪುರುಷಾಮೃಗ ಎಂಬ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಸುಧೀಶ್ ಪಾಣಾಜೆ, ಚೆಂಡೆ ಮದ್ದಳೆಯಲ್ಲಿ ಪೃತ್ವಿ ಚಂದ್ರ ಪೆರುವೋಡಿ, ಮತ್ತು ಲವಕುಮಾರ್ ಐಲ, ಚಕ್ರತಾಳದಲ್ಲಿ ಅರ್ಪಿತ್ ಕೂಡ್ಲು, ವೇಷಭೂóಣದಲ್ಲಿ ಶ್ರೀದುರ್ಗಾಂಬ ಮಲ್ಲ ಸಹಕರಿಸಿದರು. ಅರ್ಜುನ್ ಕೂಡ್ಲು, ಆಕಾಶ್ ಕೂಡ್ಲು, ಶ್ರೀವತ್ಸ ಸಹಕರಿಸಿದರು.


