ಮಂಜೇಶ್ವರ: ಕುಲಾಲ ವೇದಿಕೆ ಮಂಜೇಶ್ವರ ವತಿಯಿಂದ ದಿ.ಜಯಂತ ಮಾಸ್ತರ್ ಮೀಯಪದವು ಹಾಗೂ ದಿ. ಸೋಮಶೇಖರ್ ಬಡಾಜೆ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ವ್ಯೇದಕೀಯ ಶಿಬಿರ ಮತ್ತು ಕಾರ್ಯಕರ್ತರ ಸಮಾವೇಶವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವೆಂಬರ್ 9 ರಂದು ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ "ಗಿಳಿವಿಂಡು"ವಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಭಾನುವಾರ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದಲ್ಲಿ ವಿಶೇಷ ಪ್ರಾಥನೆ ಸಲ್ಲಿಸಿ, ಬಿಡುಗಡೆಗೊಳಿಸಲಾಯಿತು.
ಉದ್ಯಾವರ ಮಾಡ ದೈವಗಳ ಕ್ಷೇತ್ರದ ತಮ್ಮ ದೈವದ ಪಾತ್ರಿ ಶ್ರೀ ತಿಮಿರಿ ಬೆಳ್ಚಾಡರವರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಿಡುಗಡೆಗೊಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಉದ್ಯಾವರ ಮಾಡ ದೈವಗಳ ಕ್ಷೇತ್ರದ ಶ್ರೀ ಮಂಜು ಬೆಳ್ಚಾಡರು, ಧಾರ್ಮಿಕ ಮುಂದಾಳು: ಹರೀಶ್ ಶೆಟ್ಟಿ ಮಾಡ, ದಯಾಕರ ಮಾಡ, ಮಂಜೇಶ್ವರ ಕುಲಾಲ ವೇದಿಕೆಯ ಅಧ್ಯಕ್ಷರಾದ ರಾಮಚಂದ್ರ ಮಾಸ್ತರ್, ಪದಾಧಿಕಾರಿಗಳಾದ: ದಿನೇಶ್ ಕೊಡಂಗೆ, ಚಂದ್ರಶೇಖರ ಮಿಯಪದವು, ರಾಮದಾಸ್ ಕಡಂಬಾರ್, ರವಿ ಮಜಾಲು, ಕಿಶನ್ ಕಣ್ವತೀರ್ಥ, ಈಶ್ವರ ಮಾಸ್ತರ್ ಬಡಾಜೆ, ರಾಕೇಶ್ ಕುಲಾಲ್ ಕಡಂಬಾರ್, ಶಿವಾನಂದ ಹೊಸಬೆಟ್ಟು, ಶೈಲೇಶ್ ಉದ್ಯಾವರ, ನವೀನ್ ಮಜಾಲು ಮೊದಲಾದವರು ಉಪಸ್ಥಿತರಿದ್ದರು.


