ಮಧೂರು: ಮಧೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಮತ್ತು ವೀಣಾವಾದಿನಿ ತಂಡದಿಂದ ಮುತ್ತುಸ್ವಾಮಿ ದೀಕ್ಷಿತರ ಮಹಾ ಶ್ರೀಚಕ್ರ ನವಾವರಣ ಕೃತಿ ಆಲಾಪನೆ ಶುಕ್ರವಾರ ನಡೆಯಿತು.
ಸಹ ಕಲಾವಿದರಾಗಿ ಗಾಯನದಲ್ಲಿ ಪಲ್ಲವಿ, ವಿಷ್ಣು ಶರ್ಮ, ಕೃಷ್ಣಕುಮಾರಿ, ಸನ್ನಿಧಿ ಬಿ.ಎಸ್., ರಜನಿ, ಪೃಥ್ವಿ, ಅಭಿಷೇಕ್ ಸಹಕರಿಸಿದರು. ವಿದ್ವಾನ್ ಪ್ರಭಾಕರ ಕುಂಜಾರು(ವಯೊಲಿನ್) ಹಾಗೂ ಮಾಸ್ಟರ್ ಆಶ್ಲೇಷ.ಪಿ ಮೃದಂಗದಲ್ಲಿ ಸಹಕರಿಸಿದರು. ರಾಮಚಂದ್ರ ಭಟ್ ಮಧೂರು ಅವರ ಸಂಕಲ್ಪದಂತೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

.jpg)
.jpg)
