ಮಂಜೇಶ್ವರ: ಮಂಜೇಶ್ವರದ ಜನರು ಅರವತ್ತು ವರ್ಷಗಳಿಗೂ ಹೆಚ್ಚು ಕಾಲದ ಮಂಜೇಶ್ವರದ ಆರೋಗ್ಯ ಕ್ಷೇತ್ರದಲ್ಲಿ ಕಂಡ ಅತಿದೊಡ್ಡ ನಿರ್ಮಾಣ ಕಾರ್ಯವನ್ನು ವೀಕ್ಷಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಹೇಳಿದರು.
ಮಂಜೇಶ್ವರ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಮತ್ತು ಕುಟುಂಬ ಆರೋಗ್ಯ ಕೇಂದ್ರದ ಜೊತೆಯಲ್ಲಿ ನಿರ್ಮಿಸಲಾಗುತ್ತಿರುವ ಎರಡು ಕಟ್ಟಡಗಳ ಕಾಮಗಾರಿಗಳ ಉದ್ಘಾಟನೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಕುಟುಂಬ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಈ ಯೋಜನೆಗೆ 36 ಲಕ್ಷ ರೂ. ವೆಚ್ಚವಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರದ ಯೋಜನಾ ಪಾಲು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಆದ್ರ್ರಮ್ ಯೋಜನೆಯೊಂದಿಗೆ ಜಂಟಿಯಾಗಿ ಪೂರ್ಣಗೊಳಿಸಲಾಯಿತು. ನಿರ್ಮಾಣದ ಜವಾಬ್ದಾರಿಯನ್ನು ಎಚ್‍ಎಲ್‍ಎಲ್ ಲೈಫ್ ಕೇರ್ ಲಿಮಿಟೆಡ್ ವಹಿಸಿಕೊಂಡಿದೆ. ಉತ್ತಮ ಸ್ಥಿತಿಯಲ್ಲಿರುವ ಈ ಕಟ್ಟಡದಲ್ಲಿ ಕಾಯುವ ಕೊಠಡಿಗಳು(ವೈಟಿಂಗ್ ರೂಂ), ನೋಂದಣಿ ಕೌಂಟರ್‍ಗಳು, ರೋಗಿ ಸ್ನೇಹಿ ಶೌಚಾಲಯಗಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು, ವಿಕಲಚೇತನರ ಬಳಕೆಗಾಗಿ ರ್ಯಾಂಪ್ ನಿರ್ಮಾಣ, ಪೂರ್ವ ತಪಾಸಣೆ, ಸಮಾಲೋಚನಾ ವ್ಯವಸ್ಥೆ, ರೋಗಿಗಳ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷಾ ಕೊಠಡಿಗಳು, ಇಂಜೆಕ್ಷನ್ ಕೊಠಡಿ, ಡ್ರೆಸ್ಸಿಂಗ್ ಕೊಠಡಿ, ವೀಕ್ಷಣಾ ಕೊಠಡಿ, ದಾದಿಯರ ಕೊಠಡಿ, ಪ್ರಯೋಗಾಲಯ, ಔಷಧಾಲಯ, ಪ್ರಯೋಗಾಲಯ ಕಾಯುವ ಪ್ರದೇಶ, ರೋಗನಿರೋಧಕ ಕೊಠಡಿ, ಕಾಯುವ ಕೊಠಡಿಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ಜೊತೆಗೆ ನಿರ್ಮಿಸಲಾಗುತ್ತಿರುವ ಎರಡು ಹೊಸ ಕಟ್ಟಡಗಳ ಕಾಮಗಾರಿಯನ್ನು ಸಚಿವರು ಉದ್ಘಾಟಿಸಿದರು. ಕುಟುಂಬ ಆರೋಗ್ಯ ಕೇಂದ್ರಕ್ಕಾಗಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನಾ ನಿಧಿಯಿಂದ 8.58 ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ 4.74 ಕೋಟಿ ರೂ.ಗಳನ್ನು ಮತ್ತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ 3.84 ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ. ಈ ಎರಡೂ ಚಟುವಟಿಕೆಗಳನ್ನು ಏಕಕಾಲದಲ್ಲಿ ಮತ್ತು ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಪೂರ್ಣಗೊಳಿಸುವ ರೀತಿಯಲ್ಲಿ 26300 ಚದರ ಅಡಿಗಳ ಒಂದೇ ಕಟ್ಟಡವಾಗಿ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ.
ಆರು ಒಪಿ ಕೊಠಡಿಗಳು, ನೋಂದಣಿ ಕೌಂಟರ್, ಕಾಯುವ ಪ್ರದೇಶ, ಪೂರ್ವ-ತಪಾಸಣಾ ಕೊಠಡಿ, ನಸಿರ್ಂಗ್ ಸ್ಟೇಷನ್, ಮೈನರ್ ಆಪರೇಷನ್ ಥಿಯೇಟರ್, ಫೀಡಿಂಗ್ ರೂಮ್, ಕಚೇರಿ, ದಂತ ಒಪಿ, ಸಮ್ಮೇಳನ ಸಭಾಂಗಣ, ಔಷಧಾಲಯ, ಪ್ರಯೋಗಾಲಯ, ಔಷಧಾಲಯ ಪ್ರಯೋಗಾಲಯಕ್ಕಾಗಿ ಕಾಯುವ ಪ್ರದೇಶ, ಭೌತಚಿಕಿತ್ಸೆ, ರೋಗನಿರೋಧಕ ಶಕ್ತಿ, ಸಾರ್ವಜನಿಕ ಆರೋಗ್ಯ ತಂಡದ ಕೊಠಡಿ, ಸುಮಾರು 30 ಹಾಸಿಗೆಗಳನ್ನು ಹೊಂದಿರುವ ವಾರ್ಡ್‍ಗಳು, ಮೂರು ಲಿಫ್ಟ್‍ಗಳು ಇತ್ಯಾದಿಗಳನ್ನು ಸೇರಿಸಲಾಗಿದೆ. ಇದಲ್ಲದೆ, ಭವಿಷ್ಯದಲ್ಲಿ ಡಯಾಲಿಸಿಸ್ ಸೌಲಭ್ಯಗಳನ್ನು ಸೇರಿಸಬಹುದಾದ ರೀತಿಯಲ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.
ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸೇವಾ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ ಮಂಜೇಶ್ವರದ ಖ್ಯಾತ ವೈದ್ಯ, ಕಲಾವಿದ ಮತ್ತು ಬರಹಗಾರ ಕೆ. ರಮಾನಂದ ಬನಾರಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಪಿ.ಕೆ. ಮುಹಮ್ಮದ್ ಹನೀಫ್, ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರೆಹಮಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್, ಸರೋಜ ಆರ್. ಬಲ್ಲಾಳ್, ಸುಪ್ರಿಯಾ ಶೆಣೈ, ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್ ಎಂ. ಜಗದೀಶ್, ರಾಷ್ಟ್ರೀಯ ಆರೋಗ್ಯ ಮಿಷನ್ ಎಂಜಿನಿಯರ್ ನಿತಿನ್, ಬ್ಲಾಕ್ ಪಂಚಾಯತಿ ಸದಸ್ಯರಾದ ಶಫಾ ಫಾರೂಕ್, ಮೊಯ್ದೀನ್ ಕುಂಞÂ್ಞ, ಎಂ.ಎಲ್. ಅಶ್ವಿನಿ, ಅನಿಲ್ ಕುಮಾರ್, ಎಂ. ಚಂದ್ರಾವತಿ, ಫಾತಿಮತ್ ಸುಹರಾ, ಕೆ. ಅಶೋಕ, ಕೆ.ವಿ. ರಾಧಾಕೃಷ್ಣ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾತನಾಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಸ್ವಾಗತಿಸಿ, ಮಂಜೇಶ್ವರ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಭಾಕರ ರೈ ವಂದಿಸಿದರು.


.jpeg)
