ಮುಳ್ಳೇರಿಯ: ಬೇಕಲ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಐದನೇ ದೀಪಾವಳಿ ಸಂಗೀತೋತ್ಸವವನ್ನು ದೀಪಾವಳಿದಿನದಂದು ಉದ್ಘಾಟಿಸಲಾಯಿತು. ಖ್ಯಾತ ಉದ್ಯಮಿ ಹಾಗೂ ಭಾರತೀಯ ಗೋಸಂರಕ್ಷಣಾ ಹೋರಾಟಗಾರ ಕೋಲ್ಕತ್ತಾದ ಮಹಾವೀರ ಸೋನಿಕಾ ಅವರು ದೀಪ ಬೆಳಗಿಸಿದರು. ಗೋಶಾಲೆ ಸಂಸ್ಥಾಪಕ ವಿಷ್ಣುಪ್ರಸಾದ್ ಹೆಬ್ಬಾರ್, ಡಾ.ನಾಗರತ್ನ ಹೆಬ್ಬಾರ್, ಪರಂಪರಾ ವಿದ್ಯಾಪೀಠದ ಸಂಗೀತ ಗುರು ವೆಳ್ಳಿಕೋತ್ ವಿಷ್ಣು ಭಟ್, ಸಂಗೀತಗಾರ ತಾಮರಶ್ಶೇರಿ ಈಶ್ವರನ್ ಭಟ್ಟತಿರಿ ಉಪಸ್ಥಿತರಿದ್ದರು.
ಐದನೇ ದೀಪಾವಳಿ ಸಂಗೀತೋತ್ಸವ :
ಐದನೇ ಸಂಗೀತೋತ್ಸವದ ಮೊದಲ ಕಾರ್ಯಕ್ರಮ ಉಡುಪಿ ಪಾವನ ಆಚಾರ್ ನೇತೃತ್ವದಲ್ಲಿ ಪಂಚವಾದ್ಯ ವೀಣೆಗಳ ಕಛೇರಿ. ಇಡಯಾರ್ ಸಹೋದರರು, ತಾಮರಶ್ಶೇರಿ ಈಶ್ವರನ್ ಭಟ್ಟತಿರಿ, ವೆಳ್ಳಿಕೋತ್ ಸಹೋದರಿಯರಾದ ಉಷಾ ಈಶ್ವರ ಭಟ್ ಹಾಗೂ ಜಯಲಕ್ಷ್ಮಿ ಭಟ್, ಕಾಞಂಗಾಡ್ ಟಿ.ಪಿ. ಶ್ರೀನಿವಾಸನ್, ಶ್ರೀಹರಿ ಭಟ್, ಚೈತನ್ಯ ಅಶೋಕ್ ಮತ್ತು ವೈಷ್ಣವಿ ನಂಬಿಯಾರ್ ಸಂಗೀತ ಕಚೇರಿ ನೀಡಿದರು. ಪ್ರಣವಂ ಶಂಕರನ್ ನಂಬೂದಿರಿ ಅವರ ಸಂಗೀತ ಕಛೇರಿಯಲ್ಲಿ ಎಡಪ್ಪಳ್ಳಿ ಅಜಿತ್ ಪಿಟೀಲು, ಬಾಲಕೃಷ್ಣ ಕಮ್ಮತ್ ಮೃದಂಗದಲ್ಲಿ ಮತ್ತು ಶ್ರೀಜಿತ್ ವೆಳ್ಳಾಟ್ಟತ್ತನ್ನೂರ್ ಘಟದಲ್ಲಿ ಮೆರುಗು ನೀಡಿದರು. ನಂದಿ ಮಂಟಪದಲ್ಲಿ ವೆಳ್ಳಿಕ್ಕೋತ್ ವಿಷ್ಣು ಭಟ್ ನೇತೃತ್ವದ ಪರಂಪರಾ ವಿದ್ಯಾಪೀಠದ ಭಜನಾ ತಂಡದಿಂದ ವಿಷ್ಣು ಹೆಬ್ಬಾರ್ ರಚಿಸಿದ ಭಜನೆಯನ್ನು ಶ್ರದ್ಧಾಭಕ್ತಿಯಿಂದ ಹಾಡಲಾಯಿತು. ಶ್ರೀಲತಾ ನಿಕ್ಷಿತ್ ವೀಣೆಯಲ್ಲಿ, ಕುಳಲ್ಮಂದಂ ರಾಮಕೃಷ್ಣನ್ ಮೃದಂಗದಲ್ಲಿ, ಕೃಷ್ಣಪ್ರಸಾದ್ ಹೆಬ್ಬಾರ್ ಕೀಬೋರ್ಡ್‍ನಲ್ಲಿ ಸಹಕರಿಸಿದರು.

.jpg)
