ತಾಮರಸ್ಸೆರಿ: ಅಮೀಬಿಕ್ ಎನ್ಸೆಫಾಲಿಟಿಸ್ ನಿಂದ ಸಾವನ್ನಪ್ಪಿದ ಒಂಬತ್ತು ವರ್ಷದ ಬಾಲಕಿಯ ತಂದೆಯೊಬ್ಬರು ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ತಾಮರಸ್ಸೆರಿ ತಾಲ್ಲೂಕು ಆಸ್ಪತ್ರೆಯ ಡಾ. ವಿಪಿನ್ ಎಂಬವರ ಮೇಲೆ ಹಲ್ಲೆ ನಡೆದಿದೆ. ತಲೆಗೆ ಪೆಟ್ಟು ಬಿದ್ದ ವೈದ್ಯರ ಸ್ಥಿತಿ ಗಂಭೀರವಾಗಿದೆ.
ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ. ದಾಳಿಕೋರ ಸನೂಪ್ ಎಂಬ ವ್ಯಕ್ತಿಯಾಗಿದ್ದು, ಅವರನ್ನು ಪೋಲೀಸರು ವಶಕ್ಕೆ ಪಡೆದರು. ತನ್ನ ಮಗಳಿಗೆ ಅಮೀಬಿಕ್ ಎನ್ಸೆಫಾಲಿಟಿಸ್ ಇಲ್ಲ ಎಂದು ಸನೂಪ್ ಸಮರ್ಥಿಸಿಕೊಂಡಿದ್ದಾರೆ.





