ತಿರುವನಂತಪುರಂ: ರಾಜ್ಯದಲ್ಲಿ ತಮ್ಮ ಮನೆಗಳಲ್ಲಿ ಸಾವಯವ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಮನೆಮಾಲೀಕರಿಗೆ ಕಟ್ಟಡ ತೆರಿಗೆಯಲ್ಲಿ ಶೇಕಡಾ ಐದು ರಷ್ಟು ವಿನಾಯಿತಿ ನೀಡುವಂತೆ ಸರ್ಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆದೇಶಿಸಿದೆ.
ಇದು ಮೂಲ ತ್ಯಾಜ್ಯ ಸಂಸ್ಕರಣೆಯನ್ನು ಉತ್ತೇಜಿಸುವ ಭಾಗವಾಗಿದೆ. ಈ ನಿರ್ಧಾರವು 'ಮಾಲಿನ್ಯಮುಕ್ತ ನವಕೇರಳ' ಚಟುವಟಿಕೆಗಳ ಭಾಗವಾಗಿದೆ.
ಸ್ವಚ್ಛತಾ ಮಿಷನ್ ಅನುಮೋದಿಸಿದ ಯಾವುದೇ ಮೂಲ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಸ್ಥಾಪಿಸಿರುವ ಮನೆಗಳಿಗೆ ವಿನಾಯಿತಿ ಲಭಿಸಲಿದೆ.
ವರ್ಮಿ ಕಾಂಪೆÇೀಸ್ಟಿಂಗ್(ಎರೆಹುಳ ಕಾಂಪೋಸ್ಟ್), ರಿಂಗ್ ಕಾಂಪೋಸ್ಟಿಂಗ್, ಮಣ್ಣಿನ ಟ್ಯಾಂಕ್ ಕಾಂಪೆÇೀಸ್ಟಿಂಗ್, ಮಾಸ್ ಪಿಟ್ ಕಾಂಪೆÇೀಸ್ಟಿಂಗ್ ಯೂನಿಟ್, ಬಯೋ-ಪೆಡೆಸ್ಟಲ್ ಕಾಂಪೆÇೀಸ್ಟಿಂಗ್ ಯೂನಿಟ್, ಮುಚ್ಚಟ್ಟಿ ಬಿನ್ ಕಾಂಪೆÇೀಸ್ಟಿಂಗ್, ಪೋರ್ಟಬಲ್ ಹೌಸ್ ಹೋಲ್ಡ್ ಬಯೋಬಿನ್ ಯೂನಿಟ್, ಪೋರ್ಟಬಲ್ ಬಯೋಗ್ಯಾಸ್ ಯೂನಿಟ್, ಮಿನಿ ಬಯೋ ಪೆಡೆಸ್ಟಲ್ ಯೂನಿಟ್, ಪೋರ್ಟಬಲ್ ಎಚ್.ಡಿ.ಪಿ.ಎಫ್/ಬಕೆಟ್ ಕಾಂಪೆÇೀಸ್ಟ್ ಯೂನಿಟ್, ಪಿಟ್ ಕಾಂಪೆÇೀಸ್ಟಿಂಗ್ ಯೂನಿಟ್, ಪೈಪ್ ಕಾಂಪೆÇೀಸ್ಟಿಂಗ್, ಜಿ ಬಿನ್ 3 ಬಿನ್ ಸಿಸ್ಟಮ್, ಜಿ ಬಿನ್ 2 ಬಿನ್ ಸಿಸ್ಟಮ್, ವಿ ಕಾಂಪೆÇೀಸ್ಟರ್, ಸ್ಮಾರ್ಟ್ ಬಯೋಬಿನ್, ಬೊಕಾಶಿ ಬಕೆಟ್, ವರ್ಮಿಯೋನ್ ಕಿಚನ್ ವೇಸ್ಟ್ ಟ್ರೀಟ್ಮೆಂಟ್ ಯೂನಿಟ್, ಕಿಚನ್ ವೇಸ್ಟ್ ಡೈಜೆಸ್ಟರ್, ಆರ್ಗಾನಿಕ್ ಕಾಂಪೆÇೀಸ್ಟಿಂಗ್ ಬಿನ್, ಸೊಳ್ಳೆ-ಮುಕ್ತ ಬಯೋಗ್ಯಾಸ್ ಪ್ಲಾಂಟ್ ಇವು ಶುಚಿತ್ವ ಮಿಶನ್ ಅನುಮೋದಿಸಿದ ಮೂಲ ತ್ಯಾಜ್ಯ ನಿರ್ವಹಣಾ ಆಯ್ಕೆಗಳಾಗಿವೆ.
ತೆರಿಗೆ ವಿನಾಯಿತಿಗಾಗಿ, ಮನೆಮಾಲೀಕರು ಹರಿತಮಿತ್ರಂ ಅಥವಾ ಕೆ-ಸ್ಮಾರ್ಟ್ ಅಪ್ಲಿಕೇಶನ್ ಮೂಲಕ ಘೋಷಣೆಯೊಂದಿಗೆ ಅರ್ಜಿ ಸಲ್ಲಿಸಬೇಕು.
ವಾರ್ಡ್‍ನ ಉಸ್ತುವಾರಿ ಹೊಂದಿರುವ ಸ್ಥಳೀಯ ಸಂಸ್ಥೆಯ ಅಧಿಕಾರಿ ಹರಿತ ಕರ್ಮ ಸೇನೆಯ ಸಹಾಯದಿಂದ ತನಿಖೆ ನಡೆಸಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸುತ್ತಾರೆ. ಈ ವರದಿಯ ಆಧಾರದ ಮೇಲೆ ವಿನಾಯಿತಿಯನ್ನು ಪರಿಗಣಿಸಲಾಗುತ್ತದೆ. ಈ ಪಟ್ಟಿಯನ್ನು ಗ್ರಾಮ ಸಭೆಗೂ ಸಲ್ಲಿಸಲಾಗುತ್ತದೆ.
ತೆರಿಗೆ ವಿನಾಯಿತಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ನಂತರದ ವರ್ಷಗಳಲ್ಲಿ, ಹರಿತಮಿತ್ರಂ ಅರ್ಜಿಯಲ್ಲಿ ಕಾರ್ಯಾಚರಣೆಯ ಸ್ಥಿತಿಯನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸುವ ಮೂಲಕ ವಿನಾಯಿತಿ ನೀಡಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.




