ಕಾಸರಗೋಡು: ವಿದ್ಯಾವಂತ ಮಹಿಳೆಯರೂ ಕೂಡ ತಾವು ಕೆಲಸದ ಸ್ಥಳಗಳಲ್ಲಿ ಶೋಷಣೆಗೆ ಒಳಗಾಗುತ್ತಿರುವುದು ದೌರ್ಭಾಗ್ಯಕರ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪಿ. ಕುಞËಯಿಷಾ ಹೇಳಿದರು.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಮಹಿಳಾ ಆಯೋಗದ ಸಭೆಯಲ್ಲಿ ಮಾತನಾಡಿದರು. ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸೂಕ್ತ ವೇತನ ನೀಡದ ಪ್ರವೃತ್ತಿ ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ಆಯೋಗವು ಕಠಿಣ ಕ್ರಮ ಕೈಗೊಳ್ಳಲಿದೆ ಕುಟುಂಬ ವಿಷಯಗಳು, ಗಡಿ ವಿವಾದ, ನೆರೆಹೊರೆಯವರ ನಡುವಿನ ಸಮಸ್ಯೆಗಳು ಮುಂತಾದವು ಬಾಹ್ಯ ಹಸ್ತಕ್ಷೇಪದಿಂದ ಪರಿಹರಿಸಲಾಗದ ಸಾಮಾಜಿಕ ಸಮಸ್ಯೆಗಳಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಅವುಗಳನ್ನು ಆರಂಭಿಕ ಹಂತದಲ್ಲಿಯೇ ಪರಿಹರಿಸಲು ಜಾಗೃತಾ ಸಮಿತಿಗಳ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ಕುಟುಂಬ ವಿಷಯಗಳು ಸಾರ್ವಜನಿಕವಾಗಿ ದೊಡ್ಡ ಸಮಸ್ಯೆಗಳಾಗಿ ಬೆಳೆಯುವುದನ್ನು ತಡೆಯಲು ಪ್ರತಿ ಪಂಚಾಯಿಯಲ್ಲಿರುವ ಜಾಗೃತಾ ಸಮಿತಿಗಳಿಗೆ ಸಾಧ್ಯವಾಗಲಿದೆ. ಇಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಅಗತ್ಯ ತರಬೇತಿಯನ್ನು ಮಹಿಳಾ ಆಯೋಗವು ಈಗಾಗಲೇ ಸಮಿತಿಗಳಿಗೆ ನೀಡಿದೆ ಎಂದು ತಿಳಿಸಿದರು.
ಕಾಸರಗೋಡಿನಲ್ಲಿ ಸೋಮವಾರ ನಡೆದ ವಿಶೇಷ ಅದಾಲತ್‍ನಲ್ಲಿ 23 ದೂರುಗಳನ್ನು ಪರಿಗಣಿಸಲಾಯಿತು. ಇದರಲ್ಲಿ ಒಂದು ಇತ್ಯರ್ಥವಾಗಿದ್ದು, ಒಂದು ದೂರು ಜಾಗೃತಾ ಸಮಿತಿಗೆ ರವಾನಿಸಲಾಗಿದೆ. ಒಂದು ದೂರು ಕಾರ್ಯದರ್ಶಿಯ ವರದಿಗಾಗಿ ಕಳುಹಿಸಲಾಗಿದೆ. 20 ದೂರುಗಳನ್ನು ಮುಂದಿನ ಅದಾಲತ್ತಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.


