ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಸ್ವಾಮಿ ಭಜನಾಮಂದಿರಕ್ಕೆ ದಿ. ಬಟ್ಯ ಮಣಿಯಾಣಿ ತಿಮ್ಮಕಜೆ ಹಾಗೂ ದಿ. ಬೆಳ್ತಮ್ಮ ಇವರ ಸ್ಮರಣಾರ್ಥ ಇವರ ಮಕ್ಕಳು ಕಾಣಿಕೆ ಹುಂಡಿ ಸಮರ್ಪಣೆ ತುಲಾಸಂಕ್ರಮಣದ ಶುಭದಿನ ಶುಕ್ರವಾರ ನಡೆಯಿತು.
ಬೆಳಗ್ಗೆ ವೇದಮೂರ್ತಿ ಕಿಳಿಂಗಾರು ಶಿವಶಂಕರ ಭಟ್ ಪಾಂಡೇಲು ಇವರು ಶ್ರೀ ಮಹಾಗಣಪತಿ ಹೋಮ ನೆರವೇರಿಸಿ, ಶ್ರೀದೇವರಲ್ಲಿ ಪ್ರಾರ್ಥನ ನಡೆಸಿದರು. ದಿ. ಬಟ್ಯ ಮಣಿಯಾಣಿಂiÀ ಬಾಂಜತ್ತಡ್ಕ ಅವರು ಶ್ರಿ ಸತ್ಯನಾರಾಯಣ ಸ್ವಾಮಿ ಭಜನಾಮಂದಿರ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದು, ಭಜನನಾಮಂದಿರದ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರಾಗಿದ್ದರು. 2005 ರಲ್ಲಿ ಅವರು ತಿಮ್ಮಕಜೆಯಿಂದ ಕುಂಟಾರಿಗೆ ತಮ್ಮ ವಾಸಸ್ಥಳವನ್ನು ಬದಲಿಸಿದ ಬಳಿಕವೂ ಭಜನಾಮಂದಿರದ ಆಗುಹೋಗುಗಳಲ್ಲಿ ತಮ್ಮನ್ನು ಭಕ್ತಿಭಾವದಿಂದ ತೊಡಗಿಸಿಕೊಂಡಿದ್ದರು. 2009 ಏಪ್ರಿಲ್ 24 ರಂದು ಬಟ್ಯಮಣಿಯಾಣಿಯವರು ಹಾಗೂ 2018 ಮಾರ್ಚ್ 15 ರಂದು ಬೆಳ್ತಮ್ಮ ಅವರು ನಿಧನರಾದರು. ಇವರ ಗೌರವಾರ್ಥ ಮಕ್ಕಳು ಭಜನಾಮಂದಿರಕ್ಕೆ ಕಾಣಿಕೆ ಹುಂಡಿಯನ್ನು ಕೊಡುಗೆಯಾಗಿ ನೀಡುವ ತೀರ್ಮಾನಕ್ಕೆ ಬಂದಿದ್ದರು. ಇವರ ಸೇವೆಗೆ ಶ್ರೀ ಮಂದಿರದ ಆಡಳಿತ ಸಮಿತಿ ಮತ್ತು ಸರ್ವ ಸದಸ್ಯರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

.jpg)
