ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು(ರಿ ) ಇದರ ಅಧ್ಯಕ್ಷ, ಕಾಸರಗೋಡು ಕನ್ನಡ ಗ್ರಾಮ ಸಂಸ್ಥಾಪಕ ,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕನ್ನಡ ಸಂಘಟಕ ಶಿವರಾಮ ಕಾಸರಗೋಡು ಅವರಿಗೆ ಪ್ರತಿಷ್ಠಿತ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನದ ಗೌರವ ಪುರಸ್ಕಾರನೀಡಿ ಸನ್ಮಾನಿಸಲಾಯಿತು.
ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್ (ರಿ ),ಹೃದಯವಾಹಿನಿ ಕರ್ನಾಟಕ, ಹಾಗೂ ಎಸ್. ಕೆ.ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್(ರಿ ),ಮಂಗಳೂರು ಸಹಯೋಗದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ್ವಿತೀಯ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಯಿತು.
2 ನೇ ಆನಿವಾಸಿ ಕನ್ನಡಿಗರ ಸಮ್ಮೇಳನಾಧ್ಯಕ್ಷ ಲೆ. ಜನರಲ್ ಡಾ.ಡೇವಿಡ್ ಫ್ರಾಂಕ್ ಫೆನಾರ್ಂಡಿಸ್, ಮಂಜುನಾಥ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಇಂಜಿನಿಯರ್ ಕೆ.ಪಿ. ಮಂಜುನಾಥ ಸಾಗರ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಸ್.ಎಲ್.ಭಾರದ್ವಾಜ್ ಬೇಕಲ್, ಕೌಸ್ತುಭ ಮಾಸ ಪತ್ರಿಕೆ ಸಂಪಾದಕಿ ರತ್ನಾ ಹಾಲಪ್ಪ ಗೌಡ, ಸಲಹಾ ಸಮಿತಿ ನಿರ್ದೇಶಕ ಶಿವರಾಜ್ ಪಾಂಡೇಶ್ವರ,ಮಂಜುನಾಥ ರೇವಣ್ಕರ್, ಯದುಪತಿ ಗೌಡ ಬೆಳ್ತಂಗಡಿ, ಮಧುರಾ ಭಟ್, ಸೋಮಶೇಖರ ಗಾಂಧಿ, ಕೆ. ಗುರುಪ್ರಸಾದ ಕೋಟೆಕಣಿ,ಕೆ. ಜಗದೀಶ ಕೂಡ್ಲು,ಶ್ರೀಕಾಂತ ಕಾಸರಗೋಡು ಉಪಸ್ಥಿತರಿದ್ದರು.





