ಕಾಸರಗೋಡು: ಶಬರಿಮಲೆಯಲ್ಲಿ ಚಿನ್ನ ಕಳವು ಪ್ರಕರಣದಲ್ಲಿ ನಂಬೂದಿರಿ ಹಾಗೂ ಪೆÇೀತ್ತಿ ಸಮುದಾಯದ ವಿರುದ್ಧ ಎಸ್‍ಎನ್‍ಡಿಪಿ ನೇತಾರ ವೆಳ್ಳಾಪಲ್ಲಿ ನಟೇಶನ್ ನೀಡಿರುವ ವಿವಾದಾಸ್ಪದ ಹೇಳಿಕೆ ಬಗ್ಗೆ ಕೇರಳ ಬ್ರಾಹ್ಮಣ ಸಭಾ ಕಾಸರಗೋಡು ಜಿಲ್ಲಾ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ತನ್ನ ಸ್ವಾರ್ಥಕ್ಕಾಗಿ ಜಾತಿ ಸಮುದಾಯದೊಳಗೆ ಹಗೆತನ ಹಾಗೂ ಜಗಳ ಸೃಷ್ಟಿಸುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಖಂಡನೀಯ. ವಿವೇಕ, ಬುದ್ಧಿವಂತಿಕೆ ಇರುವ ಜನಾಂಗ ವೆಳ್ಳಾಪಳ್ಳಿ ನಟೇಶನ್ ಅವರ ಈ ರೀತಿಯ ಬ್ರಾಹ್ಮಣ ವಿರೋಧಿ ಹೇಳಿಕೆಯನ್ನು ತಿರಸ್ಕರಿಸಲಿದೆ.
ಒಬ್ಬನ ತಪ್ಪಿಗೆ ಬ್ರಾಹ್ಮಣ ಸಮುದಾಯದ ಎಲ್ಲರನ್ನೂ ಹೀಯಾಳಿಸುವುದನ್ನು ನಾವೆಂದು ಸಹಿಸಲು ಸಾಧ್ಯವಿಲ್ಲ. ತಪ್ಪು ಮಾಡಿದ ಯಾವನೇ ವ್ಯಕ್ತಿ, ಆದರೂ ತಕ್ಕ ಶಾಸ್ತಿ ಆಗಲೇ ಬೇಕು ಎಂಬುದು ಬ್ರಾಹ್ಮಣ ಮಹಾ ಸಭಾದ ಧ್ಯೇಯವಾಗಿದೆ. ಕೇರಳದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ವೋಟ್ ಬ್ಯಾಂಕ್ ಇಲ್ಲವೆಂಬ ತಪ್ಪು ತಿಳಿವಳಿಕೆಯಿಂದ ಬ್ರಾಹ್ಮಣ ಸಮುದಾಯವನ್ನು ಈ ರೀತಿಯಾಗಿ ದೂಷಿಸುವ ಪರಿಪಾಠ ಕೈಬಿಡಬೇಕು. ಬ್ರಾಹ್ಮಣ ಸಮುದಾಯವನ್ನು ವಿರೋಧಿಸುವ ರೀತಿಯ ಎಸ್‍ಎನ್‍ಡಿಪಿ ನೇತಾರನ ಹೇಳಿಕೆಯನ್ನು ಬ್ರಾಹ್ಮಣಸಭಾ ಖಂಡಿಸಿದೆ. ಈ ಹೇಳಿಕೆ ಜಾತೀಯತೆ ವಿರುದ್ಧ ಹೋರಾಡಿದ, ಸಾಮಾಜಿಕ ಸಮನ್ವಯಕಾರ,ಚಿಂತಕ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಮಾಡಿದ ಅಪಚಾರವಾಗಿದೆ. ವೆಳ್ಳಾಪಳ್ಳಿ ನಟೇಶನ್ ಹೇಳಿಕೆಯನ್ನು ಬ್ರಾಹ್ಮಣ ಮಹಾಸಭಾ ಖಂಡಿಸಲಿದ್ದು, ಈ ಬಗ್ಗೆ ಸಮುದಾಯದ ಕ್ಷಮೆ ಯಾಚಿಸುವಂತೆ ಬ್ರಾಹ್ಮಣ ಸಭಾ ಕಾಸರಗೋಡು ಜಿಲ್ಲಾ ಸಮಿತಿ ಸಂಚಾಲಕ ಜಯನಾರಾಯಣ ತಾಯನ್ನೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




