ಮಂಜೇಶ್ವರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಬೆಂಗಳೂರು, ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ(ಪುವೆಂಪು) ಪ್ರತಿಷ್ಠಾನ ಕಾಸರಗೋಡು ಹಾಗೂ
ಕೇರಳ ತುಳು ಅಕಾಡೆಮಿ ಮಂಜೇಶ್ವರ, ಕೇರಳ ಸರ್ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ 'ಪುವೆಂಪು ನೆನಪು-2025' ಕಾರ್ಯಕ್ರಮ ದಿನಾಂಕ: 15. 10. 2025 ಬುಧವಾರ ಬೆಳಿಗ್ಗೆ 9.00 ರಿಂದ ಮಂಜೇಶ್ವರ ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಾ0ಗಣದಲ್ಲಿ ಆಯೋಜಿಸಲಾಗಿದೆ.
ಕಾಸರಗೋಡಿನ ಅನಘ್ರ್ಯರತ್ನ, ಚತುರ್ಭಾಷಾ ವಿದ್ವಾಂಸ ದಿ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರವರದ್ದು ಸರಳ ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವ, ವಿದ್ವಾಂಸ, ಸಾಹಿತಿ, ಕವಿ, ಮಾದರಿ ಶಿಕ್ಷಕ, ಯಕ್ಷಗಾನ ನಿರೂಪಕ, ವಾಗ್ನಿ, ನಟ, ನಿರ್ದೇಶಕ ಸಂಶೋಧಕರಾಗಿದ್ದ ಅವರು ಬಹು ಭಾಷೆಗಳ ಕೆಲವೇ ಹಸ್ತ ಪ್ರತಿ ಶಾಸ್ತ್ರಜ್ಞರಲ್ಲಿ ಒಬ್ಬರು. ತುಳು ಭಾಷೆಗೆ ಸ್ವಂತ ಲಿಪಿ ಇದೆ ಎಂಬುದನ್ನು ಜಗತ್ತಿಗೆ ಶೋಧಿಸಿ ಕೊಟ್ಟವರು. ಅನೇಕ ಮಹಾಕಾವ್ಯ, ಸಂಶೋಧನಾ ಪ್ರಬಂಧ ರಚಿಸಿರುವ ಇವರು ತುಳು, ಕನ್ನಡ, ಮಲಯಾಳ ಮತ್ತು ಸಂಸ್ಕøತ ಭಾಷೆಗಳಲ್ಲಿ ಸಾಕಷ್ಟು ಸಾಹಿತ್ಯ ಕೃತಿ ಮಾಡಿರುವ ಮಹಾನ್ ಮೇಧಾವಿ. ಮಂಗಳೂರು ವಿಶ್ವವಿದ್ಯಾನಿಲಯವು ಇವರ ಸೇವೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕೇರಳ ಸರಕಾರದ ತುಳು ಅಕಾಡೆಮಿಯ ಪ್ರಥಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ್ ಚೇತನವಿಂದು ನಮ್ಮೊಂದಿಗೆ ಇಲ್ಲವಾದರೂ ಅವರ 89ನೇ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಅವರನ್ನು ಹೃದ್ಯವಾಗಿ, ಅರ್ಥಪೂರ್ಣವಾಗಿ ಸ್ಮರಿಸಲು ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ತೀರ್ಮಾನಿಸಿದೆ.
ಕಾರ್ಯಕ್ರಮ ವಿವರ:
ಬೆಳಿಗ್ಗೆ 9.-10.ರ ವರೆಗೆ ಭಾವ ಗಾಯನ, ನೃತ್ಯ ವೈಭವ, 10.-12.ರ ವರೆಗೆ ನಡೆಯಲಿರುವ ಉದ್ಘಾಟನೆ, ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅಧ್ಯಕ್ಷತೆ ವಹಿಸುವ ಸಮಾರಂಭವನ್ನು ಕರ್ನಾಟಕ ವಿಧಾನ ಪರಿಷತ್ತು ಮಾನ್ಯ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಉದ್ಘಾಟಿಸುವರು. ಮಂಗಳೂರು ಬೆಸೆಂಟ್ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ. ಮೀನಾಕ್ಷಿ ರಾಮಚಂದ್ರ ನುಡಿ ನಮನ ಸಲ್ಲಿಸುವರು.
ಈ ಸಂದರ್ಭ ಹಿರಿಯ ಸಾಹಿತಿ, ಚಿಂತಕ, ನಿವೃತ್ತ ಪ್ರಾಧ್ಯಾಪಕ ಪೆÇ್ರ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ 'ಪುವೆಂಪು ನೆನಪು-2025' ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಾಜಿ ಸಚಿವ, ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಂ. ರೇವಣ್ಣ ಪ್ರಶಸ್ತಿ ಪ್ರದಾನಮಾಡುವರು.
ಮುಖ್ಯ ಅತಿಥಿಗಳಾಗಿ ಎ.ಕೆ.ಎಂ. ಅಶ್ರಫ್ ಮಂಜೇಶ್ವರ ಶಾಸಕ,
ಜೀನ್ ಲವೀನ ಮೊಂತೆರೋ, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ, ಎಸ್.ಪ್ರದೀಪ ಕುಮಾರ ಕಲ್ಕೂರ , ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ , ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷರು, ಡಾ. ರಮಾನಂದ ಬನಾರಿ, ಹಿರಿಯ ಸಾಹಿತಿಗಳು ಉಪಸ್ಥಿತರಿದ್ದು ಮಾತನಾಡುವರು.
ಉಮೇಶ್ ಎಂ ಸಾಲಿಯಾನ್ , ರಾಷ್ಟಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಅಧ್ಯಕ್ಷ, ಸಂಕಬೈಲು ಸತೀಶ್ ಅಡಪ್ಪ , ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸದಸ್ಯ, ಟಿ. ಶಂಕರ ನಾರಾಯಣ ಭಟ್ಟ , ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷರು, ಮೊಹಮ್ಮದ್ ಡಿ ಎಂ ಕೆ ., ಎನ್. ಚನಿಯಪ್ಪ ನಾಯ್ಕ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಝಡ್.ಎ.ಕಯ್ಯಾರ್, ಅಖಿಲೇಶ್ ನಗುಮುಗಂ, ವಾಮನ್ ರಾವ್ ಬೇಕಲ್, ಅರಿಬೈಲು ಗೋಪಾಲ ಶೆಟ್ಟಿ,
ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಪೆÇ್ರ..ಎ. ಶ್ರೀನಾಥ್ , ಪುವೆಂಪು ಪ್ರತಿಷ್ಠಾನ ಕಾಸರಗೋಡು ಅಧ್ಯಕ್ಷರು ಮುಂತಾದವರು ಉಪಸ್ಥಿತರಿರುವರು.
ರವಿ ನಾಯ್ಕಾಪು , ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಎ.ಆರ್.ಸುಬ್ಬಯ್ಯಕಟ್ಟೆ, ಜಯಾನಂದಕುಮಾರ್ ಹೊಸದುರ್ಗ,ಕೆ.ಆರ್.ಜಯಾನಂದ, ರಾಮಪ್ಪ ಮಂಜೇಶ್ವರ ಮೊದಲಾದವರು ನೇತೃತ್ವ ವಹಿಸುವರು.
ಬಳಿಕ ಮಧ್ಯಾಹ್ನ 12.00- 12.30 ಸಾಂಸ್ಕøತಿಕ ಕಾರ್ಯಕ್ರಮಗಳು ಮುಂದುವರಿಯಲಿದೆ.
12.30 -1.30ರವರೆಗೆ ನಡೆಯಲಿರುವ ಪುವೆಂಪು ಚತುರ್ಭಾಷಾ ಕಾವ್ಯ ಸಂವಾದದಲ್ಲಿ :ಶ್ರೀಮತಿ ಲಕ್ಷ್ಮಿ. ಕೆ (ಸಹಾಯಕ ಪ್ರಾಧ್ಯಾಪಕರು, ಸರಕಾರಿ ಕಾಲೇಜು, ಕಾಸರಗೋಡು- ಕನ್ನಡ), ರವೀಂದ್ರನ್ ಪಾಡಿ (ಮಲೆಯಾಳಂ ಕವಿ), ಡಾ. ಆಶಾಲತಾ ಚೇವಾರು (ಸಹಾಯಕ ಪ್ರಾಧ್ಯಾಪಕರು, ಸರಕಾರಿ ಕಾಲೇಜು, ಕಾಸರಗೋಡು-ತುಳು), ಶ್ರೀ ವಿಜಯ ಕಾನ (ನಿವೃತ್ತ ಅಧ್ಯಾಪಕರು ಮಿಯಪದವು ಶಾಲೆ- ಸಂಸ್ಕೃತ) ಭಾಗವಹಿಸುವರು. ಸಮನ್ವಯಕಾರರಾಗಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಹಿರಿಯ ಕವಿಗಳು) ಸಹಕರಿಸುವರು. ನ್ಯಾ. ಥೋಮಸ್ ಡಿ' ಸೋಜಾ, ಸುಂದರ ಬಾರಡ್ಕ ಸಹಕರಿಸುವರು.






