ಮುಳ್ಳೇರಿಯ: ಪ್ರಸ್ತುತ ಶಬರಿಮಲೆಯ ಚಿನ್ನ ನಾಪತ್ತೆ ವಿಷಯದಲ್ಲಿ ಭಕ್ತ ಸಮುದಾಯದ ಕಳವಳಗಳನ್ನು ನಿವಾರಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಲು ಸಿದ್ಧರಾಗಿರಬೇಕು ಎಂದು ಅಖಿಲ ಭಾರತ ಯಾದವ ಮಹಾ ಸಭಾ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಎಂ. ರಮೇಶ್ ಯಾದವ್ ಆಗ್ರಹಿಸಿದರು.
ಅವರು ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ಆಶ್ರಯದಲ್ಲಿ ಭಾನುವಾರ ಮುಳ್ಳೇರಿಯದ ಯಾದವ ಸಭಾ ಭವನದಲ್ಲಿ ನಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಮುದಾಯಗಳ ಪ್ರಾಧಾನ್ಯತೆ ಹೆಚ್ಚಾಗಿದೆ. ಅದ್ದರಿಂದ ಸಮುದಾಯಗಳು ಸಂಘಟನೆಯಾಗಿ ಬೆಳೆಯಬೇಕು. ಸ್ವಂತ ಕುಟುಂಬ, ಜಾತಿ ಸಮುದಾಯವನ್ನು ಬಿಟ್ಟು ರಾಜಕೀಯಕ್ಕೆ ಆದ್ಯತೆ ನೀಡುವ ಕಾಲಘಟ್ಟದಲ್ಲಿ ಜಾತಿ ಸಮುದಾಯವನ್ನು ಸಂಘಟಿಸುವ ಮೂಲಕ ಎಲ್ಲಾ ಸಮುದಯಗಳಂತೆಯೇ ಯಾದವ ಸಮುದಾಯವೂ ಉದ್ಯೋಗ, ಶಿಕ್ಷಣ ಸೇರಿದಂತೆ ಮೀಸಲಾತಿ ಪಡೆಯಲು ಸಾಧ್ಯವಾಗಬೇಕು. ಅದಕ್ಕಾಗಿರುವ ಹೋರಾಟ ನಿರಂತರವಾಗಿಬೇಕು. ಜನಸಂಖ್ಯಾ ಆಧಾರದಲ್ಲಿ ಕೇರಳದಲ್ಲಿ ಮೀಸಲಾತಿ ನೀಡುತ್ತಿರುವುದು ಅದ್ದರಿಂದ ಸರಕಾರ ಜಾತಿ ಸಮೀಕ್ಷೆ ನಡೆಸಿ ಮೀಸಲಾತಿಯನ್ನು ಪುನ:ಕ್ರಮೀಕರಿಸಬೇಕೆಂದು ಅವರು ಆಗ್ರಹಿಸಿದರು.
ತಾಲೂಕು ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಅಖಿಲ ಕೇರಳ ಯಾದವ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಮೋದರನ್ ಚಿಮೇನಿ, ರಾಜ್ಯ ಮಹಿಳಾ ವಿಭಾಗ ಅಧ್ಯಕ್ಷೆ ರಾಜೇಶ್ವರಿ ಪಿ. ಭಾಗವಹಿಸಿದರು.
ಈ ಸಂದರ್ಭದಲ್ಲಿ ಪುರಂಕಳಿ ಕಲಾವಿದ ಕೃಷ್ಣನ್ ಪಣಿಕ್ಕರ್, ಇಂಗ್ಲೀಷ್ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದ ಡಾ. ಮಂಜುಷಾ ಸಜಿಮೋನ್, ತಾಲೂಕು ಉಪಾಧ್ಯಕ್ಷ ಸೀತಾರಾಮ ಕೂಟ್ಲಂಕಲ್ಲು, ಹಿರಿಯ ವಕೀಲ ಎ.ಸಿ.ಗೋಪಾಲ ಮಣಿಯಾಣಿ ಮಂಗಳೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯಾದವ ಸಭಾ ಜಿಲ್ಲಾಧ್ಯಕ್ಷ ಬಾಬು ಮಣಿಯೂರು, ರಾಜ್ಯ ಕಾರ್ಯದರ್ಶಿ ಶಿವಪ್ರಸಾದ್ ಕಡಾರ್, ಅರವಿಂದಾಕ್ಷನ್ ನೆಲ್ಲಿಮೊಟ್ಟ, ಕುಸುಮ ಟೀಚರ್, ಗಂಗಾಧರ್ ತೆಕ್ಕೆಮೂಲೆ, ದಾಮೋದರನ್ ಕುಡಂಕುಯಿ, ಕರುಣಾಕರ ಬದಿಯಡ್ಕ, ರಾಮಚಂದ್ರ ಮಣಿಯಾಣಿ ಅತ್ತನಡಿ, ನಾರಾಯಣ ಮಣಿಯಾಣಿ ಮುಂತಾದವರು ಶುಭಾಂಸನೆಗೈದರು.
ಆರಂಭದಲ್ಲಿ ಅಖಿಲ ಕೇರಳ ಯಾದವ ಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ನಾರಾಯಣ ಮಣಿಯಾಣಿ ಚೇರುಕೂಡ್ಲು ಸ್ವಾಗತಿಸಿ, ಅಪ್ಪಕುಂಞÂ್ಞ ಮಣಿಯಾಣಿ ಕೊನಲ ವಂದಿಸಿದರು.






