ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ದೊಡ್ಡ ಘೋಷಣೆ ಮಾಡುವ ಮೂಲಕ ಮತಬ್ಯಾಂಕ್ ಖಚಿತಪಡಿಸಲು ಎಲ್ಲಾ ಹಾದಿಗಳನ್ನೂ ಬಳಸುವುದನ್ನು ಖಚಿತಪಡಿಸಿರುವರು. ಕಲ್ಯಾಣ ಪಿಂಚಣಿಯನ್ನು 2,000 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಇತರ ಸೌಕರ್ಯಗಳನ್ನೂ ಹಿಂದುಮುಮದಿಲ್ಲದೆ ಹೆಚ್ಚಿಸಲಾಗಿದೆ. ಅಸ್ತಿತ್ವದಲ್ಲಿರುವ 1,600 ರೂ.ಗಳನ್ನು 400 ರೂ. ಹೆಚ್ಚಳಗೊಳಿಸಿ 2000 ಮಾಡಲಾಗಿದೆ.
ಜೊತೆಗೆ, ಪಿಂಚಣಿದಾರರಿಗೆ ಪಾವತಿಸಬೇಕಾದ ಡಿಎ ಬಾಕಿಯ ಒಂದು ಕಂತನ್ನು ನವೆಂಬರ್‍ನಲ್ಲಿ 4% ರಂತೆ ಸಂಬಳದೊಂದಿಗೆ ಪಾವತಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಮಹಿಳಾ ಸುರಕ್ಷತೆಗೆ ನೆರವು ನೀಡುವ ಹೊಸ ಯೋಜನೆಯಡಿಯಲ್ಲಿ, ಅರ್ಹ ಮಹಿಳೆಯರಿಗೆ 1,000 ರೂ.ಗಳನ್ನು ನೀಡಲಾಗುವುದು. 33 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಇದರೊಂದಿಗೆ, ಯುವಕರಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಸಹ ಘೋಷಿಸಲಾಯಿತು. ವಾರ್ಷಿಕ ಕುಟುಂಬ ಆದಾಯ 1 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 1,000 ರೂ.ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಸಾಕ್ಷರತಾ ಪ್ರವರ್ತಕರಿಗೆ ಮಾಸಿಕ ಗೌರವಧನವನ್ನು 1,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದುವರೆಗಿನ ಬಾಕಿ ಹಣವನ್ನು ಪಾವತಿಸಲಾಗುವುದು.
ಪೂರ್ವ ಪ್ರಾಥಮಿಕ ಶಿಕ್ಷಕರು ಮತ್ತು ದಾದಿಯರ ಮಾಸಿಕ ವೇತನವನ್ನು 1,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಅತಿಥಿ ಉಪನ್ಯಾಸಕರ ಮಾಸಿಕ ವೇತನವನ್ನು ಗರಿಷ್ಠ 2,000 ರೂ.ಗಳಿಗೆ ಹೆಚ್ಚಿಸಲಾಗುವುದು.
ರಬ್ಬರ್ ರೈತರಿಗೆ ನೀಡಲಾಗುವ ರಬ್ಬರ್‍ನ ಬೆಂಬಲ ಬೆಲೆಯನ್ನು ಪ್ರತಿ ಕೆಜಿಗೆ 180 ರೂ.ಗಳಿಂದ 200 ರೂ.ಗಳಿಗೆ ಹೆಚ್ಚಿಸಲಾಗುವುದು. ಇದು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಭತ್ತದ ಖರೀದಿ ಬೆಲೆಯನ್ನು 28.20 ರೂ.ಗಳಿಂದ 30 ರೂ.ಗಳಿಗೆ ಹೆಚ್ಚಿಸಲು ಸಹ ನಿರ್ಧರಿಸಲಾಗಿದೆ.




