ಕಾಸರಗೋಡು: ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ವೀಣಾ ಜಾರ್ಜ್ ಅಕ್ಟೋಬರ್ 3 ರಂದು ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 9ಕ್ಕೆ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರವೇಶ ಸಮಾರಂಭ, 10ಕ್ಕೆ ಪುತ್ತಿಗೆ ಕುಟುಂಬ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆ, 11ಕ್ಕೆ ಬಾಯಾರು ಕುಟುಂಬ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ, ಮಧ್ಯಾಹ್ನ 12ಕ್ಕೆ ಕುಂಬಳೆ ಆರಿಕ್ಕಾಡಿ ಕುಟುಂಬ ಆರೋಗ್ಯ ಕೇಂದ್ರದ ಉದ್ಘಾಟನೆ, 2.30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅವಲೋಕನಾ ಸಭೆ, ನಂತರ ಜಿಲ್ಲಾ ಪಂಚಾಯಿತಿ ವಠಾರದಲ್ಲಿ ಕಡು ಬಡತನ ನಿರ್ಮೂಲನಾ ಜಿಲ್ಲೆಯಾಘಿ ಕಾಸರಗೋಡಿನ ಘೋಷಣೆ, ಸಂಜೆ 4ಕ್ಕೆ ತೆಕ್ಕಿಲ್ ಟಾಟಾ ಸರ್ಕಾರಿ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಉದ್ಘಾಟನೆ, 4.30ಕ್ಕೆ ಕಾಞಂಗಾಡ್‍ನಲ್ಲಿ ಕನಿವ್ ಪ್ಯಾಲಿಯೇಟಿವ್ ಕೇರ್ ಫಿಸಿಯೋಥೆರಪಿ ಸೆಂಟರ್ ಉದ್ಘಾಟನೆ ನಡೆಯುವುದು.




