ಕಾಸರಗೋಡು: ಉಪಜಿಲ್ಲಾ ಶಾಲಾ ವಿಜ್ಞಾನ ಮೇಳದ ಲಾಂಛನವನ್ನು ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷ ಖಾದರ್ ಬದ್ರಿಯಾ ಬಿಡುಗಡೆಗೊಳಿಸಿದರು. ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವಕ್ಕಾಗಿ ವಿದ್ಯಾರ್ಥಿಗಳಿಂದ ಲಾಂಛನವನ್ನು ಆಹ್ವಾನಿಸಲಾಗಿತ್ತು. ಇವುಗಳಲ್ಲಿ ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಮಹಮ್ಮದ್ ಹನಾನ್ ರಚಿಸಿದ ಲಾಂಛನವನ್ನು ಆಯ್ಕೆ ಮಾಡಲಾಗಿತ್ತು.
ಲಾಂಛನ ಬಿಡುಗಡೆ ಸಮಾರಂಭದಲ್ಲಿ ಚೆಂಗಳ ಗ್ರಾಮ ಪಂಚಾಯತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಲೀಂ ಎಡನೀರು, ಕೆ ಎನ್. ಪ್ರಭಾಕರನ್, ಸಜಿ, ಪ್ರವೀಣ್ ಕುಮಾರ್, ಶ್ರೀಪತಿ, ಶ್ರೀಕಲಾ, ದೀಪ, ರೋಶ್ನ , ಶುಭ, ಆಧಿರ, ಶಿಶಿರ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರಭಾಕರನ್ ಧನ್ಯವಾದ ಸಮರ್ಪಿಸಿದರು.





