ಮಂಜೇಶ್ವರ: ಮಂಗಳೂರಿನಿಂದ ಮಸ್ಕತ್‍ಗೆ ಇರುವ ನೇರ ವಿಮಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ವಿಮಾನ ಕಂಪೆನಿಗಳು ಸ್ಥಗಿತಗೊಳಿಸಿದ್ದು ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆ ಉಂಟಗಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ವಿಮಾನ ಸೇವೆ ಪುನರಾರಂಭಿಸುವಂತೆ ಒಮಾನ್ ಕೆ ಎಂ ಸಿ ಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಒಮಾನ್ ಘಟಕ ಒತ್ತಾಯಿಸಿದೆ.
ಅಕಾಡಮಿ ಒಮಾನ್ ಘಟಕ ಅಧ್ಯಕ್ಷ ಅಬೂಬಕರ್ ರೋಯಲ್ ಬೋಲ್ಲಾರ್, ಕರ್ನಾಟಕ ಜಾನಪದ ಪರಿಷತ್ತು ಒಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ, ವಿಠ್ಠಲ ಪೂಜಾರಿ ಮಂಗಳೂರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯಕಟ್ಟೆ ಮೊದಲಾದವರು ಸಂಸದ ರಾಜ್ ಮೋಹನ್ ಉಣ್ಣಿತಾನ್ ಅವರನ್ನು ಕಾಸರಗೋಡಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು





