ಕುಂಬಳೆ: ಕುಂಬಳೆ ಸನಿಹದ ಮುಟ್ಟಂ ಬೇರಿಕೆ ನಿವಾಸಿ ಕೃತೇಶ್ ಅವರ ಪತ್ನಿ, ಯುವ ವಕೀಲೆ ಸಿ. ರಂಜಿತಾ ಕುಮಾರಿ(30)ಅವರ ಮೃತದೇಹ ಕುಂಬಳೆಯಲ್ಲಿರುವ ತನ್ನ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಬಾರ್ ಅಸೋಸಿಯೇಶನ್ ಸದಸ್ಯೆಯಗಿದ್ದ ಇವರು, ಪ್ರಜಾಪ್ರಭುತ್ವವಾದಿ ಮಹಿಳಾ ಅಸೋಸಿಯೇಶನ್ ಕುಂಬಳೆ ಏರಿಯಾ ಸಮಿತಿ ಸದಸ್ಯೆ, ಗ್ರಾಮ ಸಮಿತಿ ಕಾರ್ಯದರ್ಶಿ, ಡಿವೈಎಫ್‍ಐ ಬ್ಲಾಕ್ ಘಟಕ ಕೋಶಾಧಿಕಾರಿಯಾಗಿದ್ದರು.
ಮನೆಯವರು ಕರೆಮಾಡಿದರೂ, ಸ್ಪಂದಿಸದಿರುವುದರಿಂದ ಅವರ ಕುಂಬಳೆಯಲ್ಲಿನ ಕಚೇರಿಗೆ ತಲುಪಿ ನೋಡಿದಾಗ ಕಚೇರಿ ಒಳಗಿಂದ ಚಿಲಕ ಹಾಕಿರುವುದು ಕಂಡುಬಂದಿತ್ತು. ಈಕೆ ಸಂಬಂಧಿಕರು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ತೆರೆದು ನೋಡಿದಾಗ ನೇಣಿನಲ್ಲಿ ಮೃತದೇಹ ಕಂಡುಬಂದಿತ್ತು. ಕೊಠಡಿಯಿಂದ ಇವರು ಬರೆದಿರುವುದೆಂದು ಸಂಶಯಿಸಲಾಗಿರುವ ಪತ್ರ ಲಭಿಸಿದ್ದು, ಇದರಲ್ಲಿ, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೈಯುತ್ತಿರುವ ಬಗ್ಗೆ ಬರಹ ಹೊಂದಿತ್ತು. ಕುಂಬಳೆ ಬತ್ತೇರಿ ನಿವಾಸಿ ಚಂದ್ರನ್-ವಾರಿಜಾಕ್ಷಿ ದಂಪತಿ ಪುತ್ರಿಯಾಗಿರುವ ಇವರು, ಕಾಸರಗೋಡಿನ ನ್ಯಾಯಾಲಯದಲ್ಲಿ ವಕೀಲೆಯಾಗಿದ್ದರು. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತನಿಖೆ ಅಂಗವಾಗಿ ಇವರ ಮೊಬೈಲ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಕುಂಬಳೆ ಪೇಟೆಯಲ್ಲಿ ಮೃತದೇಹವನ್ನು ಅಂತಿಮದರ್ಶನಕ್ಕಿರಿಸಿದ ಬಳಿಕ ಬೇರಿಕೆಯಲ್ಲಿರುವ ಮನೆ ಹಿತ್ತಿಲಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.





