ಕುಂಬಳೆ: ವಾಸ್ತವ್ಯವಿದ್ದ ಕಟ್ಟಡದ ಮಹಡಿಯ ಕಬ್ಬಿಣದ ಕೊಂಡಿಗೆ ಸೀರೆಯಿಂದ ತಯಾರಿಸಿದ ನೇಣು ಬಿಗಿದು ಧುಮುಕಿದ ಇತರ ರಾಜ್ಯ ಕಾರ್ಮಿಕೆ ಮೃತಪಟ್ಟಿದ್ದಾಳೆ. ಸೀತಾಂಗೋಳಿ ಸನಿಹದ ಮರದ ಮಿಲ್ಲಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಉತ್ತರಪ್ರದೇಶ ನಿವಾಸಿ ಖಾಲಿದ್ ಎಂಬವರ ಪತ್ನಿ ತಸ್ಲಿ ಮುನಿಶ(40)ಮೃತಪಟ್ಟ ಮಹಿಳೆ.
ನಾಲ್ಕು ತಿಂಗಳ ಹಿಂದೆಯಷ್ಟೆ ಖಾಲಿದ್, ಪತ್ನಿ ಹಾಗೂ ಮಗುವಿನೊಂದಿಗೆ ಮರದ ಮಿಲ್ಲಿಗೆ ಕೆಲಸಕ್ಕೆ ಆಗಮಿಸಿದ್ದರು. ಮರದ ಮಿಲ್ಲಿನ ಹಿಂಭಾಗದ ಕೊಠಡಿಯಲ್ಲಿ ಕುಟುಂಬ ವಾಸಿಸುತ್ತಿದ್ದು, ರಾತ್ರಿ ವೇಳೆ ಮಹಿಳೆ ಕೃತ್ಯವೆಸಗಿದ್ದಾರೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




