ಕಾಸರಗೋಡು: ಪ್ಲಸ್‍ಟು ವಿದ್ಯಾರ್ಥಿನಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಬಸ್ ಚಾಲಕ, ಪಡನ್ನಕ್ಕಾಡ್ ಕರುವಳ ನಿವಾಸಿ ಶರತ್‍ಚಂದ್ರ ಎಂಬಾತನನ್ನು ಬೇಕಲ ಠಾಣೆ ಡಿವೈಎಸ್‍ಪಿ ವಿ.ವಿ ಮನೋಜ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬಸ್ ಪ್ರಯಾಣದ ಮಧ್ಯೆ ವಿದ್ಯಾರ್ಥಿನಿಯನ್ನು ಪರಿಚಯಮಾಡಿಕೊಂಡ ಶರತ್‍ಚಂದ್ರ ನಂತರ ಈಕೆಯನ್ನು ವಸತಿಗೃಹಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದಾನೆ, ನಂತರ ಈಕೆಯ ನಗ್ನ ಚಿತ್ರ ತೆಗೆದು, ಈ ಫೋಟೋ ತೋರಿಸಿ ನಿರಂತರ ದೌರ್ಜನ್ಯವೆಸಗಿರುವ ಬಗ್ಗೆ ದೂರು ನೀಡಲಾಗಿತ್ತು. ದೌರ್ಜನ್ಯವೆಸಗಿದ ನಂತರ ಆರೋಪಿ ವಿದ್ಯಾರ್ಥಿನಿಯಿಂದ ದೂರಾಗಿದ್ದನು. ವಿದ್ಯಾರ್ಥಿನಿಗೆ ನಡೆಸಿದ ಕೌನ್ಸೆಲಿಂಗ್‍ನಲ್ಲಿ ದೌರ್ಜನ್ಯದ ಬಗ್ಗೆ ಮಾಹಿತಿ ಲಭಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ, ಐಟಿ ಆ್ಯಕ್ಟ್, ಮಾನಭಂಗಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.




