ತಿರುವನಂತಪುರಂ: ತಿರುವನಂತಪುರಂನಿಂದ ಕೊಚ್ಚಿಗೆ ಮೂರೂವರೆಯಿಂದ ನಾಲ್ಕು ಗಂಟೆಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವ ಬಿಸಿನೆಸ್ ಕ್ಲಾಸ್ ಬಸ್ ಸೇವೆಯನ್ನು ಕೆಎಸ್‍ಆರ್‍ಟಿಸಿ ಪ್ರಾರಂಭಿಸಲಿದೆ ಎಂದು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಹೇಳಿದ್ದಾರೆ. ಎಮಿರೇಟ್ಸ್ ವಿಮಾನಗಳಲ್ಲಿನ ಬಿಸಿನೆಸ್ ಕ್ಲಾಸ್ ಸೀಟುಗಳಂತೆಯೇ ಸೌಲಭ್ಯಗಳೊಂದಿಗೆ ಹೊಸ ಬಸ್‍ಗಳನ್ನು ಪ್ರಾರಂಭಿಸಲಾಗುವುದು.
ಪ್ರಯಾಣಿಕರಿಗೆ ಸಹಾಯ ಮಾಡಲು ಚಾಲಕನ ಹೊರತಾಗಿ 'ಬಸ್ ಹೋಸ್ಟೆಸ್' ಕೂಡ ಇರುತ್ತಾರೆ. ವಿಶ್ವ ದರ್ಜೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸೀಟುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಫೇಸ್‍ಬುಕ್ ಪೆÇೀಸ್ಟ್‍ನ ಪೂರ್ಣ ಆವೃತ್ತಿ:
ಕೇರಳದಲ್ಲಿ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಪ್ರಾರಂಭಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪೂರ್ಣಗೊಂಡ ನಂತರ, ತಿರುವನಂತಪುರಂನಿಂದ ಕೊಚ್ಚಿಗೆ ಕೇವಲ ಮೂರೂವರೆಯಿಂದ ನಾಲ್ಕು ಗಂಟೆಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವ ಆಧುನಿಕ 'ಬಿಸಿನೆಸ್ ಕ್ಲಾಸ್' ಬಸ್ ಸೇವೆಯನ್ನು ಪ್ರಾರಂಭಿಸಲಾಗುವುದು. ಇದು ರಾಜ್ಯದ ಪ್ರಯಾಣ ಅನುಭವದಲ್ಲಿ ಹೊಸ ಅಧ್ಯಾಯವನ್ನು ತೆರೆಯುವುದು ಖಚಿತ.
ಹೊಸ ಬಸ್‍ಗಳು ಎಮಿರೇಟ್ಸ್ ವಿಮಾನಗಳಲ್ಲಿನ ಬಿಸಿನೆಸ್ ಕ್ಲಾಸ್ ಸೀಟುಗಳಂತೆಯೇ ಸೌಲಭ್ಯಗಳೊಂದಿಗೆ ಬರಲಿವೆ.
25 ಪ್ರಯಾಣಿಕರ ಬಸ್‍ಗಳಲ್ಲಿ ಪ್ರತಿಯೊಂದೂ ವೈಯಕ್ತಿಕ ಟಿವಿ, ಚಾಜಿರ್ಂಗ್ ಸೌಲಭ್ಯ ಮತ್ತು ವೈ-ಫೈ ಅನ್ನು ಹೊಂದಿರುತ್ತದೆ.
ಚಾಲಕನ ಹೊರತಾಗಿ, ಪ್ರಯಾಣಿಕರಿಗೆ ಸಹಾಯ ಮಾಡಲು 'ಬಸ್ ಹೋಸ್ಟೆಸ್' ಕೂಡ ಇರುತ್ತಾರೆ. ವಿಶ್ವ ದರ್ಜೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸೀಟುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.






