ಕಾಸರಗೋಡು: ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ, ಪೇರಡ್ಕ ಮಹಾತ್ಮಜಿ ಗ್ರಂಥಾಲಯ ಮತ್ತು ಪೇರಡ್ಕದ ಪಯಸ್ವಿನಿ ಅರಣ್ಯ ಸಂರಕ್ಷಣಾ ಸಮಿತಿ ವತಿಯಿಂದ ಮುಳಿಯಾರು ಅರಣ್ಯ ಪ್ರದೇಶದಲ್ಲಿ ಅರಣ್ಯ ಸಂರಕ್ಷಣಾ ಅಭಿಯಾನವನ್ನು ಆಯೋಜಿಸಲಾಯಿತು.
ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯನ್ನು ಪಯಸ್ವಿನಿ ಅರಣ್ಯ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಮತ್ತು ಬೀಟ್ ಅರಣ್ಯ ಅಧಿಕಾರಿ ಎ.ಕೆ. ಸುನಿಲ್ ಉದ್ಘಾಟಿಸಿದರು. ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಪಿ. ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಸಮಿತಿ ಅಧ್ಯಕ್ಷ ರಘು ಕೆ, ಮಧುಸೂದನನ್ ಪೇರಡ್ಕ, ಅರಿಯಿಲ್ ಅರಣ್ಯ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಹಾಗೂ ಅರಣ್ಯಾಧಿಕಾರಿ ಅರ್ಜುನ್ ಮತ್ತು ಜಿಷ್ಣು ಉಪಸ್ಥಿತರಿದ್ದರು. ಗ್ರಂಥಾಲಯ ಸಮಿತಿ ಕಾರ್ಯದರ್ಶಿ ಸತ್ಯನ್ ಕೆ ಸ್ವಾಗತಿಸಿದರು. ಗ್ರಂಥಾಲಯ ಉಪಾಧ್ಯಕ್ಷ ವಿನೋದ್ ಕುಮಾರ್ ಸಿ ವಂದಿಸಿದರು.





