ಉಪ್ಪಳ: ಉಪ್ಪಳ ಚೆಕ್‍ಪೋಸ್ಟ್ ಸನಿಹದ ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಹಾನಿ ಸಂಭವಿಸಿದೆ. ಹೋಟೆಲ್ ಒಳಗಿದ್ದ ಇಬ್ಬರು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಫ್ಯಾನ್, ಫ್ರಿಡ್ಜ್ ಸೇರಿದಂತೆ ಇಲೆಕ್ಟ್ರಾನಿಕ್ ಉಪಕರಣಗಳು ಹಾನಿಗೀಡಾಗಿದೆ. ಹೋಟೆಲ್ ಎದುರು ಭಾಗಕ್ಕೆ ತಗುಲಿದ್ದ ಬೆಂಕಿ ಕ್ಷಣಾರ್ಧದಲ್ಲಿ ಇತರ ಪ್ರದೇಶಕ್ಕೆ ವ್ಯಾಪಿಸಿದೆ. ಉಪ್ಪಳದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ಶಮನಗೊಳಿಸಿದ್ದಾರೆ.




