ಕಾಸರಗೋಡು: ಮಹಿಳೆಯೊಂದಿಗೆ ಪ್ರೀತಿಯ ಸೋಗಿನಲ್ಲಿ ಪರಿಚಯಮಾಡಿಕೊಂಡು, ಆಕೆಯಿಂದ ಹತ್ತು ಪವನಿನ ಚಿನ್ನಾಭರಣ ಪಡೆದು, ನಂತರ ವಾಪಾಸುಮಾಡದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ಮಾರ್ಕೆಟ್ ಸನಿಹದ ಕಾಟಿಕುಳಂ ನಿವಾಸಿ, ಯುವಕಾಂಗ್ರೆಸ್ ನೇತರ ಶನೀದ್ ಎಂಬಾತನನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೈದ್ಯಕೀಯ ಕಾಲೇಜು ಆಸ್ಪತ್ರೆ ಆಸುಪಾಸಿನ ಮಹಿಳೆಯನ್ನು ನಕಲಿಫೇಸ್ ಬುಕ್ ಮೂಲಕ ಪರಿಚಯಮಾಡಿಕೊಂಡು, ಪ್ರೀತಿಸುವುದಾಗಿ ತಿಳಿಸಿ ಆಕೆಯಿಂದ ಹತ್ತು ಪವನಿನ ಚಿನ್ನಾಭರಣ ಪಡೆದುಕೊಂಡಿದ್ದನು. ನಂತರ ಚಿನ್ನ ವಾಪಾಸು ನೀಡದೆ ವಂಚಿಸಿರುವ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಈತನನ್ನು ಬಂಧಿಸಲಾಗಿದೆ.




