ಕಾಸರಗೋಡು: ರಾಷ್ಟ್ರೀಯ ಆಯುಷ್ ಮಿಷನ್, ಕಾಸರಗೋಡು ಜಿಲ್ಲೆಯಲ್ಲಿ ಫಿಸಿಯೋಥೆರಪಿಸ್ಟ್ ಹುದ್ದೆಗೆ ನೇಮಕಾತಿಗಾಗಿ ಸಂದರ್ಶನ ಅಕ್ಟೋಬರ್ 28 ರಂದು ಬೆಳಿಗ್ಗೆ 10ಕ್ಕೆ ಡಿ.ಪಿ.ಎಂ.ಎಸ್.ಯು.ಕಾಸರಗೋಡು (ಪಡನ್ನಕ್ಕಾಡ್ ಜಿಲ್ಲಾ ಆಸ್ಪತ್ರೆ) ಯಲ್ಲಿ ನಡೆಯಲಿದೆ.
ಅಭ್ಯರ್ಥಿಗಳು ಫೆÇೀಟೋ ಅಳವಡಿಸಿದ ಗುರುತಿನ ಚೀಟಿ, ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳು, ವಯಸ್ಸು ದೃಢೀಕರಿಸುವ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕಾಗಿದೆ. ಫಿಸಿಯೋಥೆರಪಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಅರ್ಹತೆಯಾಗಿದ್ದ, 40 ವರ್ಷ ವಯೋಮಿತಿಯಾಗಿದೆ. ಮಾಸಿಕ 21,000 ರೂಪಾಯಿ ವೇತನ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಕ್ಯೆ(0467 2288106)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

