ಕಾಸರಗೋಡು: ವಿಜಯದಶಮಿ ಅಂಗವಾಗಿ ಜಿಲ್ಲಾದ್ಯಂತ ಮಕ್ಕಳಿಗೆ ವಿದ್ಯಾರಂಭ ನಡೆಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಅರಿವಿನ ಮೊದಲ ಅಕ್ಷರ ಕಲಿಸಿಕೊಡಲಾಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ, ಕಾಸರಗೋಡು ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನೀ ಕ್ಷೇತ್ರ, ಕಾಸರಗೋಡು ಪಿಲಿಕುಂಜೆ ಶ್ರೀ ಜಗದಂಬಾ ಕ್ಷೇತ್ರ ಸೇರಿದಂತೆ ನಾನಾ ಕಡೆ ಮಕ್ಕಳಿಗೆ ವಿದ್ಯಾರಂಭ ನಡೆಸಲಾಯಿತು.
ಕಾಸರಗೋಡು ಪಿಲಿಕುಂಜೆ ಶ್ರೀ ಜಗದಂಬಾ ಕ್ಷೇತ್ರದಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆಸಿಕೊಡಲಾಯಿತು.




