ಕಾಸರಗೋಡು: ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವೆ ಜೆ. ಚಿಂಜುರಾಣಿ ಅ. 3ರಂದು ಜಿಲ್ಲೆಯ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಸ್ವರ್ಗ ಸಮುದಾಯ ಭವನದ ಉದ್ಘಾಟನೆ, ಪೆರ್ಲ ಶ್ರೀ ಕ್ಷೇತ್ರ ಇಡಿಯಡ್ಕ ಕ್ಷೇತ್ರದ ಶ್ರೀ ಅನ್ನಪೂರ್ಣ ಸಭಾಂಗಣದಲ್ಲಿ ಜಿಲ್ಲಾ ಡೇರಿ ಇಲಾಖೆ ವತಿಯಿಮದ ನಡೆಯುವ ಜಿಲ್ಲಾ ಹಾಲು ಉತ್ಪಾದಕರ ಸಮಾವೇಶದ ಉದ್ಘಾಟನೆ, ಮಧ್ಯಾಹ್ನ 2 ಗಂಟೆಗೆ ಕಾಞಂಗಾಡ್ ವ್ಯಾಪಾರ ಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ, 3ಕ್ಕೆ ಪರಪ್ಪದಲ್ಲಿ ಪಲಾಯಿ ಯೋಜನೆಯ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.




