ಕಾಸರಗೋಡು: ನಗರದ ನುಳ್ಳಿಪ್ಪಾಡಿ ಸನಿಹದ ಚೆನ್ನಿಕ್ಕರ ಅನಿಲ ಚಿತಾಗಾರದ ಶೋಚನೀಯ ಸ್ಥಿತಿಯನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿ ವತಿಯಿಂದ ಶನಿವಾರ ನಗರಸಭಾ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು. ಪ್ರತಿಭಟನಾಕಾರರು ನಗರಸಭಾ ಕಚೇರಿ ಎದುರು ಶವದಹನದ ಅಣಕು ಪ್ರದರ್ಶನ ನಡೆಸುವ ಮೂಲಕ ಅಧಿಖಾರಿಗಳ ಗಮನಸೆಳೆದರು.
ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ.ರಮೇಶ್ ಧರಣಿ ಉದ್ಘಾಟಿಸಿದರು. ವೀಣಾ ಅರುಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ದಯಾನಂದ ಪೂಜಾರಿ, ಕೆ.ಆರ್.ಹರೀಶ್, ಉಮಾ ಕಡಪ್ಪುರಂ, ರಾಮ್ ಮೋಹನ್, ಹೇಮಲತಾ ಶೆಟ್ಟಿ, ಶ್ರೀಲತಾ ಟೀಚರ್,ರಮೇಶ ಕಡಪ್ಪುರಂ, ಕೆ.ಶಂಕರ, ಮಣಿ ನೆಲಕಾಲ, ಸಂತೋಷ ಭಂಡಾರಿ, ಮನೋಹರನ್ ಕಡಪ್ಪುರಂ, ಅರುಣ್ ಕುಮಾರ್ ಶೆಟ್ಟಿ, ಪುರುಷೋತ್ತಮನ್ ಕಡಪ್ಪುರಂ ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ್ದರು. ಬಿಜೆಪಿ ನಗರ ಪೂರ್ವ ಸಮಿತಿ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಸ್ವಾಗತಿಸಿದರು.

