ಕಾಸರಗೋಡು: ದೀರ್ಘ ಕಾಲದ ನಂತರ ಕಾಸರಗೋಡು ಜಿಲ್ಲೆಯಲ್ಲಿ ನಕ್ಸಲರ ಸಂಚಾರದ ಭೀತಿ ಕಾಡಲಾರಂಭಿಸಿದೆ. ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡುನಲ್ಲಿ ಮಾವೋಯಿಸ್ಟ್ ಬೆಂಬಲಿತರ ಪೆÇೀಸ್ಟರ್ ವೆಳ್ಳರಿಕುಂಡ್ ಪೆÇೀಲೀಸ್ ಠಾಣಾ ವ್ಯಾಪ್ತಿಯ ಪ್ಲಾತೋಡತ್ತ್ ಎಂಬಲ್ಲಿ ಕಾಣಿಸಿಕೊಂಡಿದೆ. ಇಲ್ಲಿನ ಬಸ್ ತಂಗುದಾಣವೊಂದರಲ್ಲಿ "ಜನಪರ ವಿಮೋಚನ ರಂಗ, ಏರಿಯ ಕಮಿಟಿ" ಎಂಬ ಹೆಸರಲ್ಲಿ ನೋಟೀಸು ಲಗತ್ತಿಸಲಾಗಿದೆ.
ಶುಕ್ರವಾರ ಪೆÇೀಸ್ಟರ್ ಕಾಣಿಸಿಕೊಂಡಿದ್ದು, ನಾಗರಿಕರು ನೀಡಿದ ಮಾಹಿತಿಯಂತೆ ವೆಳ್ಳರಿಕುಂಡು ಠಾಣೆ ಪೆÇೀಲೀಸರು, ರಹಸ್ಯ ತನಿಖಾದಳದವರು ಸ್ಥಳಕ್ಕಾಗಮಿಸಿ ನಾಗರಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. "ನಾಗಪುರ ಜೈಲಲ್ಲಿರುವ ಕಾಮ್ರೇಡ್ ರಿಜಾಸ್‍ನನ್ನು ತಕ್ಷಣ ಬಿಡುಗಡೆ ಮಾಡಬೇಕು, ಉತ್ತರ ಭಾರತದಲ್ಲಿ ನಿರಪರಾಧಿಗಳಾದ ಆದಿವಾಸಿಗಳ ವಂಶಹತ್ಯೆ ನಿಲ್ಲಿಸಬೇಕು'ಮುಂತಾದ ಬರಹವುಳ್ಳ ಭಿತ್ತಿಪತ್ರ ಲಗತ್ತಿಸಲಾಗಿದೆ.
ಸ್ಥಳೀಯಾಡಳಿತ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾವೋಯಿಸ್ಟ್ ಪೆÇೀಸ್ಟರ್ ಕಾಣಿಸಿಕೊಂಡಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಕೇರಳದಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದ ನಕ್ಸಲ್ ಚಟುವಟಿಕೆ ಸಂಪೂರ್ಣ ದೂರಾಗಿದ್ದು, ವೆಳ್ಳರಿಕುಮಡು ಪ್ರದೇಶದಲ್ಲಿ ನಕ್ಸಲ್ ಭಿತ್ತಿಪತ್ರ ಕಾಣಿಸಿಕೊಳ್ಳುತ್ತಿದ್ದಂತೆ ಪೊಲೀಸರು ಜಾಗೃತರಾಗಿದ್ದಾರೆ. ಹೆಚ್ಚುವರಿ ಪೆÇೀಲೀಸ್ ಪಡೆಯನ್ನು ವೆಳ್ಳರಿಕುಂಡ್ ಠಾಣೆಗೆ ಕಳುಹಿಸಿಕೊಡಲಾಗಿದೆ.
ಛತ್ತೀಸ್‍ಗಡ ಸೇರಿದಂತೆ ವಿವಿಧ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ನಕ್ಸಲರ ವಿರುದ್ಧ ಕಠೀಣ ಕ್ರಮಕ್ಕೆ ಮುಂದಾಗುತ್ತಿದ್ದಂತೆ ದಕ್ಷಿಣದ ರಾಜ್ಯಗಳಿಗೆ ಪಲಾಯನ ಮಾಡುತ್ತಿರಬೇಕೆಂಬ ಸಂಶಯವೂ ಕಾಡಲಾರಂಭಿಸಿದೆ.

