ಮಧೂರು: ಮಧೂರು ಸನಿಹದ ಸಿರಿಬಾಗಿಲು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ವಷರ್ಂಪ್ರತಿ ಜರುಗುತ್ತಿರುವ ಕಾರ್ತಿಕ ದೀಪೆÇೀತ್ಸವ ಹಾಗೂ ಬಲಿವಾಡು ಕೂಟ ಮಹೋತ್ಸವ ಅ. 22ರಂದು ಆರಂಭಗೊಂಡು ನ. 21ರ ವರೆಗೆ ನಡೆಯಲಿದೆ.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಶೀನ ಶೆಟ್ಟಿ, ಕ್ಷೇತ್ರದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮೋಹನ್ ಕುಮಾರ್ ಶೆಟ್ಟಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಪ್ರತಿದಿನವರಾತ್ರಿ 7 ರಿಂದ 8.25 ರ ವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆದು 8.30ಕ್ಕೆ ಮಹಾಪೂಜೆಯೊಂದಿಗೆ ಅನ್ನಪ್ರಸಾದ ವಿತರಣೆ ನಡೆಯುವುದು. ಊರಿನ ವಿವಿಧ ಸಂಘ ಸಂಸ್ಥೆಗಳು, ಕುಟುಂಬ ಶ್ರೀ ಘಟಕಗಳು, ಸ್ವಯಂ ಸೇವಾ ಸಂಸ್ಥೆಗಳು ಆಮಂತ್ರಣ ಪತ್ರಿಕೆ ಪ್ರತಿ ಮನೆಗಳಿಗೆ ತಲುಪಿಸುವುದರ ಜತೆಗೆ ಒಂದು ತಿಂಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿಮಾಡಿಕೋಮಡಿರುವುದಾಗಿ ಪ್ರಕಟಣೆ ತಿಳಿಸಿದೆ.


