ಕಾಸರಗೋಡು: ಬೆಂಗಳೂರಿನ ಭಾರತೀನಗರದ ರಂಗಪುತ್ಥಳಿ ಯಶೋಧಾ ಪಪ್ಪೆಟ್ರಿಯ 16ನೇ ವಾರ್ಷಿಕೋತ್ಸವ 'ಪುತ್ಥಳಿ ಸಂಭ್ರಮ'ಕಾಸರಗೋಡಿನ ಕೋಟೆಕಣಿಯ ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ನಡೆಯಿತು. ಸಾಂಸ್ಕøತಿಕ ಭವನ ವತಿಯಿಂದ ಆಯೋಜಿಸಲಾಗಿದ್ದ 'ಕಾಸರಗೋಡು ದಸರಾ-2025' ಸಂಪನ್ನ ಹಾಗೂ 'ದಸರೋತ್ಸವ'ಕಾರ್ಯಕ್ರಮದ ಸಂದರ್ಭ ವಾರ್ಷಿಕೋತ್ಸವ ನಡೆಸಲಾಯಿತು.
ಭಾರತೀಯ ಸಂಸ್ಕøತಿಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ತೊಗಲು ಬೊಂಬೆಯಾಟವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಗಪುತ್ಥಳಿ ಬೊಂಬೆಯಾಟ ಸಂಸ್ಥೆ ನಡೆಸಿರುವ ಸಾಧನೆಗಳ ಬಗ್ಗೆ ಡಾ. ಯಶೋಧಾ ಶಶಿಧರ್ ಮಾಹಿತಿ ನೀಡಿದರು. ಕೋಟೆಕಣಿಯ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸಮಾರಂಭ ಉದ್ಘಾಟಿಸಿದರು. ಬೆಂಗಳೂರಿನ ಬಿ.ಕೆ ನಾಗರಾಜ್, ಬಿ.ಎಲ್ ಹರೀಶ್, ಕವಿತಾ ಕೆ, ನಾಗರತ್ನಾ ಎನ್, ಶ್ರೀನಿವಾಸ ಮೂರ್ತಿ, ಶಶಿಧರ್ ಉಪಸ್ಥಿತರಿದ್ದರು.
ಈ ಸಂದರ್ಭ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ , ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿರಮೇಶ್, ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಶ್ರೀರಾಮನಾಥ ಸಾಂಸ್ಕøತಿಕ ಭವನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಿಷಮರ್ಧಿನಿ ತೊಗಲು ಬೊಂಬೆಯಾಟ ಪ್ರದರ್ಶನ, ಗಾಯನ, ನೃತ್ಯ ಪ್ರದರ್ಶನ ನಡೆಯಿತು.





