ಕಾಸರಗೋಡು: ದೇಶದ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಇರಬಾರದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಹೇಳಿದರು.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯಾ ಕ್ಯಾಂಪಸ್‍ನ ಹೊಸ ಶೈಕ್ಷಣಿಕ ಬ್ಲಾಕ್‍ನ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಎಲ್ಲಾ ದೇಶಗಳು ಇಂದು ಅಭಿವೃದ್ಧಿಗಾಗಿ ಪೈಪೆÇೀಟಿ ನಡೆಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ವೈಮನಸ್ಸು ಬಿಟ್ಟು ಕಾರ್ಯಾಚರಿಸಬೇಕಾಗಿದೆ.
ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ (ಪಿಎಂಜೆವಿಕೆ) ಯೋಜನೆಯನ್ವಯ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮಂಜೂರು ಮಾಡಿದ 52.68 ಕೋಟಿ ರೂ. ಮೊತ್ತ ವ್ಯಯಿಸಿ ಹೊಸ ಶೈಕ್ಷಣಿಕ ಬ್ಲಾಕ್ ಅನ್ನು ನಿರ್ಮಿಸಲಾಗುತ್ತಿದೆ.
ಹಲವಾರು ಯೋಜನೆಗಳು ಕೇಂದ್ರ ಸರ್ಕಾರವು ಕೇರಳದಲ್ಲಿ ಇದನ್ನು ಜಾರಿಗೆ ತರುತ್ತಿದೆ ಎಂದು ಸಚಿವರು ಹೇಳಿದರು. ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಡಗರದಲ್ಲಿ ಉದ್ಘಾಟಿಸಿದ ಆಸ್ಪತ್ರೆ ಕಟ್ಟಡಕ್ಕೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯಿಂದ 50ಕೋಟಿ ರೂ. ಸೇರಿದಂತೆ ಕೇರಳದ ನಾನಾ ಯೋಜನೆಗಳಿಗೆ ಕೇಂದ್ರ ಮೊತ್ತ ಮಂಜೂರುಗೊಳಿಸಿದೆ ಎಂದು ಸಚಿವರು ವಿವರಿಸಿದರು.
ವಿಶ್ವ ವಿದ್ಯಾಲಯದ ಉಪಕುಲಪತಿ ಪೆÇ್ರ.ಸಿದ್ದು ಪಿ.ಅಲ್ಗೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವವಿದ್ಯಾನಿಲಯವು ಅಲ್ಪಾವಧಿಯಲ್ಲಿಯೇ ಉತ್ತಮ ಪ್ರಗತಿ ಸಾಧಿಸುವುದರ ಜತೆಗೆ ವಿಶ್ವವಿದ್ಯಾನಿಲಯವು ಅತಿ ಶೀಘ್ರ ಬೆಳವಣಿಗೆ ಹೊಂದುತ್ತಿದೆ. ವಿಶ್ವವಿದ್ಯಾನಿಲಯದ ಅಭಿವೃದ್ಧಿಯಲ್ಲಿ ಹೊಸ ಶೈಕ್ಷಣಿಕ ಬ್ಲಾಕ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಸಚಿವರು ಕಲಾವಿದ ದೀಪಕ್ ಪಿ.ಕೆ, ಸಿಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಅಂಜನಾ ರಘು, ವಿಶ್ವವಿದ್ಯಾಲಯದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಕಾಂತ್ ವಿ.ಕೆ ಅವರನ್ನು ಸನ್ಮಾನಿಸಿದರು. ಸಚಿವಿಶ್ವವಿದ್ಯಾಲಯದ ಕೋರ್ಟ್, ಕಾರ್ಯಕಾರಿ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು. ಪ್ರಭಾರ ಕುಲಸಚಿವ ಡಾ. ಆರ್.ಜಯಪ್ರಕಾಶ್ ಸ್ವಾಗತಿಸಿದರು. ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‍ನ ಡೀನ್ ಪೆÇ್ರ. ಸಜಿ ಟಿ.ಜಿ. ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸಚಿವ ಜಾರ್ಜ್ ಕುರಿಯನ್ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿರುವ ವಿವೇಕಾನಂದ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.





