ಕಾಸರಗೋಡು: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅ. 30ರಂದು ಕಾಸರಗೋಡು ಜಿಲ್ಲೆಗೆ ಭೇಟಿನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 8.30ಕ್ಕೆ ಕಾಸರಗೋಡು ತಲುಪಿರುವ ಸಚಚಿವರು ನಂತರ ತಳಂಗರೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡುವರು. 10ಕ್ಕೆ ಮಧೂರು ಗ್ರಾಮ ಪಂಚಾಯಿತಿಯ ಕಾಸರಗೋಡು ಪಾರೆಕಟ್ಟ ಸನಿಹ ನಿರ್ಮಿಸಿರುವ ಅನಿಲ ಚಾಲಿತ ಸ್ಮಶಾನ ಉದ್ಘಾಟಿಸುವರು. 11.30ಕ್ಕೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಪ್ರಧಾನಮಂತ್ರಿ ಜನ್ ವಿಕಾಸ್ ಕಾರ್ಯಕ್ರಮ್ (ಪಿಎಂಜೆವಿಕೆ) ಯೋಜನೆಯನ್ವಯ 52.68 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಶೈಕ್ಷಣಿಕ ಬ್ಲಾಕ್‍ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ವಿಶ್ವ ವಿದ್ಯಾಲಯದ ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲಗೂರು ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತನ್, ಉದುಮ ಶಾಸಕ ಸಿ.ಎಚ್. ಕುಂಞಂಬು ಮೊದಲಾದವರು ಪಾಲ್ಗೊಳ್ಳುವರು. ನಂತರ ಸಚಿವರು ಕಣ್ಣೂರು ಜಿಲ್ಲೆಗೆ ತೆರಳುವರು.


