ಕೋಝಿಕೋಡ್: ಪೇರಂಬ್ರಾದಲ್ಲಿ ನಡೆದ ಪ್ರತಿಭಟನೆಯ ವೇಳೆ ಯುಡಿಎಫ್-ಸಿಪಿಎಂ ಸಂಘರ್ಷಾವಸ್ಥೆ ಸೃಷ್ಟಿಯಾಗುವ ಸಾಧ್ಯತೆಯ ಘಟನೆ ನಿನ್ನೆ ರಾತ್ರಿ ನಡೆದಿದೆ. ಘರ್ಷಣೆಯ ನಂತರ, ಪೋಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ನಡೆಸಿದರು.
ಅಶ್ರುವಾಯು ಪ್ರಯೋಗದ ವೇಳೆ ಸಂಸದ ಶಾಫಿ ಪರಂಬಿಲ್ ಗಾಯಗೊಂಡರು. ಲಾಠಿಚಾರ್ಜ್‍ನಲ್ಲಿ 30ಕ್ಕೂ ಹೆಚ್ಚು ಯುಡಿಎಫ್ ಕಾರ್ಯಕರ್ತರು ಗಾಯಗೊಂಡರು. ಸಿಪಿಎಂ ಮತ್ತು ಯುಡಿಎಫ್ ಕಾರ್ಯಕರ್ತರು ಮುಖಾಮುಖಿಯಾಗುತ್ತಿದ್ದಂತೆ ಪೋಲೀಸರು ಲಾಠಿಚಾರ್ಜ್ ಮಾಡಿದರು.
ಸಿಕೆಜಿ ಕಾಲೇಜು ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಘರ್ಷಣೆ ನಡೆದಿತ್ತು. ನಿನ್ನೆ ಮತ್ತೆ ಪೇರಂಬ್ರಾ ಪೇಟೆಯಲ್ಲಿ ಕಾಂಗ್ರೆಸ್ ಹರತಾಳ ಆಚರಿಸಿತು.
ಸಂಸದರೆಂದು ಗೊತ್ತಿದ್ದೂ ಪೋಲೀಸರು ಶಾಫಿ ಪರಂಬಿಲ್ ಮೇಲೆ ನಡೆಸಿರುವ ಹಲ್ಲೆ ರಾಜಕೀಯ ಪ್ರೇರಿತವಾದುದು ಎಂದು ಕಾಂಗ್ರೆಸ್ಸ್ ಆರೋಪಿಸಿದೆ. ತೀವ್ರ ಗಾಯಗೊಂಡು ಮೂಗಿನಿಂದ ರಕ್ತಸ್ರಾವವಾದ ಕಾರಣ ಸಂಸದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

