ಮಧೂರು: ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಧನ್ವಂತರಿ ಜಯಂತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಬೆಳಿಗ್ಗೆ ಶ್ರೀ ದೇವರಿಗೆ ಗಣಪತಿ ಹವನ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧನ್ವಂತರಿ ಹವನ, ಪವಮಾನ ಅಭಿಷೇಕ, ದೇವರಿಗೆ ವಿಶೇಷ ಪೂಜೆ ಜರುಗಿತು. ಕಾರ್ಯಕ್ರಮದ ಅಂಗವಾಗಿ ಪದ್ಮಪ್ರಿಯ ಭಜನಾ ಮಂಡಳಿಯಿಂದ ಭಜನಾ ಸೇವೆ, ಶ್ರೀ ಅನಂತಪದ್ಮನಾಭ ಇವರಿಂದ ವಯಲಿನ್ ಕಾರ್ಯಕ್ರಮ ಜರಗಿತು. ವಿದ್ವಾನ್ ವಸಂತ ಗೋಸಾಡ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ನೇತೃತ್ವದಲ್ಲಿ ಅಪಾರಾಹ್ನ ಅತಿಥಿ ಕಲಾವಿದರಾದ ಹರೀಶ್ ಬಳಂತಿಮೊಗರು, ರವಿರಾಜ್ ಪನೆಯಾಲ, ವಾಸುದೇವ ರಂಗ ಭಟ್, ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ರಾತ್ರಿ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ, ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

.jpg)
