ಕೀವ್: ಕ್ರಮಾಟೋರ್‌ಸ್ಕ್ ನಗರದ ಮೇಲೆ ರಷ್ಯಾ ಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಉಕ್ರೇನ್‌ನ ಇಬ್ಬರು ಪತ್ರಕರ್ತ ಮೃತಪಟ್ಟಿದ್ದಾರೆ ಎಂದು ಡೊನೆಟ್‌ಸ್ಕ್ ಪ್ರದೇಶದ ಗವರ್ನರ್ ವಡಿಮ್ ಫಿಲಾಶ್‌ಕಿನ್ ತಿಳಿಸಿದ್ದಾರೆ.
'ಸಂಸ್ಥೆಯ ಪತ್ರಕರ್ತರು ಪೆಟ್ರೋಲ್ ಬಂಕ್‌ವೊಂದರಲ್ಲಿ ಕಾರಿನಲ್ಲಿ ಕುಳಿತಿದ್ದರು.
ಇದೇ ವೇಳೆ ನಡೆದ ಡ್ರೋನ್ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ' ಎಂದು ಸರ್ಕಾರಿ ಒಡೆತನದ ಸುದ್ದಿವಾಹಿನಿ ಫ್ರೀಡಮ್ ಚಾನೆಲ್ ತಿಳಿಸಿದೆ.
ರಷ್ಯಾ ಪಡೆಗಳು ನಡೆಸಿದ ಡ್ರೋನ್ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಖಂಡಿಸಿದ್ದಾರೆ.
ಅನಿಲ ಘಟಕದ ಮೇಲೆ ದಾಳಿ: ದಕ್ಷಿಣ ರಷ್ಯಾದ ಪ್ರಮುಖ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್ ಪಡೆಗಳು ಡ್ರೋನ್ ದಾಳಿ ನಡೆಸಿವೆ. ಇದರಿಂದ, ಕಜಾಕಸ್ತಾನದಿಂದ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
'ಒರೆನ್‌ಬರ್ಗ್ ಸ್ಥಾವರದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಅದರ ಅನಿಲ ಸಂಸ್ಕರಣೆ ಮತ್ತು ಶುದ್ಧೀಕರಣ ಘಟಕಗಳಲ್ಲಿ ಒಂದಕ್ಕೆ ಹಾನಿಯಾಗಿದೆ' ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.




