ಬದಿಯಡ್ಕ: ಆಶ್ರಯ ಆಶ್ರಮದ ಸಂಸ್ಥಾಪಕನ್ನೆಪ್ಪಾಡಿಯಲ್ಲಿ ಶಾರದಾ ಟೀಚರ್ ಪುಣ್ಯತಿಥಿ ಆಚರಣೆ
ಬದಿಯಡ್ಕ: ಆಶ್ರಯ ಆಶ್ರಮದ ಸಂಸ್ಥಾಪಕರಾದ ಶಾರದಾ ಟೀಚರ್ ಅವರ 8 ನೇ ಪುಣ್ಣತಿಥಿ ಪ್ರಯುಕ್ತ ಪುಷ್ಪಾರ್ಚನೆ ಮತ್ತು ಪ್ರಾರ್ಥನೆ ಗುರುವಾರ ಆಶ್ರಮದಲ್ಲಿ ಜರಗಿತು.
ಆಶ್ರಮದ ಟ್ರಸ್ಟಿ ಶ್ರೀಕೃಷ್ಣ ಭಟ್ ಪುದುಕೋಳಿ, ಶಶಿಧರ ಐಎಎಸ್, ಸವಿತ ಟೀಚರ್ ಮಾತನಾಡಿದರು. ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರು, ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಮಹೇಶ್ ವಳಕುಂಜ, ಸದಾಶಿವ ಮಾಸ್ತರ್ ಹಾಗೂ ಪಂಚಾಯಿತಿ ಸದಸ್ಯರುಗಳಾದ ಶಂಕರ್ ಡಿ., ಸ್ವಪ್ನ ಹರೀಶ, ಅಖಿಲೇಶ್ ನಗುಮುಗಂ, ಬಿ.ಕೆ. ಪ್ರಕಾಶ್, ಟ್ರಸ್ಟಿ ಶಿವಶಂಕರ ಮಾಸ್ತರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಮೇಶ ಕಳೇರಿ ಸ್ವಾಗತಿಸಿ, ಟ್ರಸ್ಟಿ ಬಾಲಕೃಷ್ಣ ಏಣಿಯರ್ಪು ವಂದಿಸಿದರು.





