ಪೆರ್ಲ: ಪೆರ್ಲದ ಶ್ರೀ ಶಾರದಾಮರಾಟಿ ಸಮಾಜ ಸೇವಾ ಸಂಘ, ಶಾರದಾ ಮರಾಟಿ ಮಹಿಳಾ ವೇದಿಕೆ ಮತ್ತು ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ಪೆರ್ಲದಮರಾಟಿ ಬೋಡಿರ್ಂಗ್ ಹಾಲ್‍ನ 7ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಮರಾಟಿ ಬೋಡಿರ್ಂಗ್ ಹಾಲ್‍ನಲ್ಲಿ ಜರುಗಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಹವನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನೆ ಹಾಗೂ ಸಭಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜನರಲ್ ಮ್ಯಾನೇಜರ್, ಕರ್ನಾಟಕ ಮರಾಟಿ ಸಂಘದ ಮಾಜಿ ಅಧ್ಯಕ್ಷ ನರಸಿಂಹ ನಾಯ್ಕ ಸಮಾರಂಭ ಉದ್ಘಾಟಿಸಿದರು.
ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 2024-25 ವರ್ಷದ ಮಾರ್ಚ್‍ತಿಂಗಳಲ್ಲಿ ನಡೆದ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 2024-25 ರಲ್ಲಿ ಸೇವಾ ನಿವೃತ್ತಿ ಹೊಂದಿದ ಸಂಘದ ಸದಸ್ಯ ಉದ್ಯೋಗಸ್ಥರಿಗೆ ಸನ್ಮಾನ ಮತ್ತು ಮರಾಟಿ ಸಮಾಜದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಶೇಷಪ್ರತಿಭಾ ಪುರಸ್ಕಾರದಲ್ಲಿ ಭರತ ನಾಟ್ಯ ಕಲಾವಿದೆ ಹಿಮಜಾಬಾಯಿ ಹಾಗೂ ನಾಟಿವೈದ್ಯೆ ಗೀತಾ ಯಾನೆ ತಿಮ್ಮಕ್ಕ ಇವರನ್ನು.ಸನ್ಮಾನಿಸಲಾಯಿತು.
ಪುತ್ತೂರು ಮರಾಟಿ ಸಂಘದ ನಿಕಟಪೂರ್ವ ಅಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲ ದುಗ್ಗಪ್ಪ ನಾಯ್ಕ, ಕೇರಳ ಹೈಕೋರ್ಟ್ ವಕೀಲ ಶಿವಾಜಿ ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಹಾಗೂ ಮಹಮಾಯಿ ಮರಾಟಿ ಸಂಘ ಅಡ್ಯನಡ್ಕದ ಮಾಜಿ ಅಧ್ಯಕ್ಷ ಕುಂಞ ನಾಯ್ಕ, ಕಾಸರಗೋಡು ಕೆಎಂವೈಜಿಸಿ ಅಧ್ಯಕ್ಷೆ ಲೀಲಾ ಟೀಚರ್, ಮಕ್ಕಳ ತಜ್ಞ ಡಾ. ಬಿ ನಾರಾಯಣ ನಾಯ್ಕ, ಮರಾಟಿ ಸಂರಕ್ಷಣಾ ಸಮಿತಿ ಸ್ಥಾಪಕ ಕಾರ್ಯದರ್ಶಿ ಮತ್ತು ಮರಾಟಿ ಬೋಡಿರ್ಂಗ್ ಹಾಲ್ ಪೆರ್ಲದ ಮ್ಯಾನೇಜಿಂಗ್ ಟ್ರಸ್ಟ್ ಡಾ. ಬಿ ಕೃಷ್ಣ ನಾಯ್ಕ ,ಮ ಪೆರ್ಲ ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜಾ ಅಡ್ಯನಡ್ಕ ಉಪಸ್ಥಿತರಿದ್ದರು.
ಕುಮಾರಿ ಹರ್ಷಿತ ಮತ್ತು ಬಳಗ ಪ್ರಾರ್ಥನೆ ಹಾಡಿದರು. ಪುಷ್ಪ ಆಮೆಕ್ಕಳ ಸ್ವಾಗತಿಸಿದರು. ಆಟೋಟ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಲಕ್ಷ್ಮಿ ಟೀಚರ್ ನಲ್ಕ ವಾಚಿಸಿದರು. ಶ್ರೀ ಸತೀಶ್ ಕುಮಾರ್ ಕೈಯಾರು ಮತ್ತು ಕುಮಾರಿ ಮಂಜುಶ್ರೀ ನಲ್ಕ ಕಾರ್ಯಕ್ರಮ ನಿರೂಪಿಸಿದರು. ಗೋಪಿಕೃಷ್ಣ ಬದಿಯಡ್ಕ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಸಮಾಜ ಬಾಂಧವರಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮ ನಡೆಯಿತು.


