ಕಾಸರಗೋಡು: ಯುಎಇ ಕೆಎಂಸಿಸಿಯ ಮೊದಲ ಅಧ್ಯಕ್ಷ ಮಠತ್ತಿಲ್ ಮುಸ್ತಫಾ ಅವರ ಸ್ಮರಣಾರ್ಥ ಯುಎಇ ಕೆಎಂಸಿಸಿ ಸಂಸ್ಥಾಪಕರ ಸಂಸ್ಥೆ ಸ್ಥಾಪಿಸಿರುವ 'ಮಠತ್ತಿಲ್ ಮುಸ್ತಫಾ ಸಾಮಾಜಿಕ ಶ್ರೇಷ್ಠತಾ ಪ್ರಶಸ್ತಿ 2025'ಕ್ಕೆ ಅನಿವಾಸಿ ಉದ್ಯಮಿ ಯಾಹ್ಯಾ ತಳಂಗರೆ ಆಯ್ಕೆಯಾಗಿದ್ದು, 15 ರಂದು ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ಬಸ್ ನಿಲ್ದಾಣದ ಸನಿಹದ ಆರ್.ಕೆ. ಮಾಲ್ ಸಭಾಂಗಣದಲ್ಲಿ ಪ್ರಶಸ್ತಿಪ್ರದಾನ ಸಮಾರಂಭ ನಡೆಯಲಿದೆ ಎಂದು ಯುಎಇ ಕೆಎಂಸಿಸಿ ಸಂಸ್ಥಾಪಕರ ಸಂಘಟನೆಯ ಅಧ್ಯಕ್ಷ ಪಿ.ಎ. ಅಬೂಬಕರ್ ಹಾಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಲ್ಕು ದಶಕಗಳ ಹಿಂದೆ ಯುಎಇಯಲ್ಲಿ ಕೆಎಂಸಿಸಿಗೆ ಅಡಿಪಾಯ ಹಾಕಿದ ನಂತರ, ಯುಎಇ ಕೆಎಂಸಿಸಿ ಸಂಸ್ಥಾಪಕರ ಸಂಘಟನೆಯು ಶಾಶ್ವತ ನಿವಾಸಿಗಳ ಗುಂಪಾಗಿದ್ದು, ಮೊದಲ ಅಧ್ಯಕ್ಷರಾದ ಮಠತ್ತಿಲ್ ಮುಸ್ತಫಾ ಅವರು ಕೆಎಂಸಿಸಿಯ ಸ್ಥಾಪನೆ ಮತ್ತು ಚಟುವಟಿಕೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು
ಯಾಹ್ಯಾ ತಳಂಗರೆ ಅವರು ದೇಶ ಮತ್ತು ವಿದೇಶಗಳಲ್ಲಿ ದತ್ತಿ, ಸಾಮಾಜಿಕ, ಕಲೆ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು, ಪ್ರಸಕ್ತ ದುಬೈ ಕೆಎಂಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಪಾಣಕ್ಕಾಡ್ ಸೈಯದ್ ಹೈದರಾಲಿ ಶಿಹಾಬ್ ತಙಳ್ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ಶಾಸಕ ಎನ್.ಎ.ಹ್ಯಾರಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮುಸ್ಲಿಂ ಲೀಗ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಇ.ಟಿ. ಮುಹಮ್ಮದ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಎಂ. ಅಶ್ರಫ್ ಶಾಸಕ, ಮಾಜಿ ಸಚಿವ ಸಿ.ಟಿ. ಅಹ್ಮದಲಿ, ಕಲ್ಲಡ ಮಹಿ ಹಾಜಿ ಮೊದಲಾದವರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಇಬ್ರಾಹಿಂಕುಟ್ಟಿ ಚೋಕ್ಲಿ, ಹಸೈನಾರ್ ತೊಡಂಬಗಂ, ಜಾಫರ್ ಏರಿಯಲ್, ಹಂಝ ತೊಟ್ಟಿ, ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಶೀದ್ ಹಾಜಿ ಕಳ್ಳಿಂಗಲ್ ಉಪಸ್ಥಿತರಿದ್ದರು.


