HEALTH TIPS

ಕೇಶವಿನ್ಯಾಸಗಾರ ಜಾವೇದ್​ ಹಬೀಬ್ ವಿರುದ್ಧ ವಂಚನೆ ಪ್ರಕರಣ: ಲುಕ್​ಔಟ್ ನೋಟಿಸ್ ಜಾರಿ

 ಲಖನೌ: ಖ್ಯಾತ ಕೇಶವಿನ್ಯಾಸಗಾರ ಜಾವೇದ್​ ಹಬೀಬ್​ ಮತ್ತು ಅವರ ಪುತ್ರನ ವಿರುದ್ಧ 20ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿದ್ದು ಅವರ ಕುಟುಂಬದ ಎಲ್ಲರಿಗೂ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಜಾವೇದ್​ ಹಬೀಬ್​ ಮತ್ತು ಅವರ ಪುತ್ರ ಹೂಡಿಕೆ ಯೋಜನೆ ಮೂಲಕ 100ಕ್ಕೂ ಹೆಚ್ಚು ಜನರಿಗೆ ₹ 5 ರಿಂದ ₹ 7 ಕೋಟಿ ವಂಚನೆ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಂಭಾಲ್ ನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 


ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಜಾವೇದ್​ ಹಬೀಬ್​ ಮತ್ತು ಅವರ ಪುತ್ರನನ್ನು ಬಂಧಿಸಿಲ್ಲ. ಆದರೆ ಹಗರಣಕ್ಕೆ ಕಾರಣವಾಗಿರುವ ಕಂಪನಿಯ ಸಂಸ್ಥಾಪಕಿ ಜಾವೇದ್​ ಹಬೀಬ್ ಅವರ ಪತ್ನಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ನಡುವೆ ಜಾವೇದ್​ ಹಬೀಬ್ ಅವರ ವಕೀಲ ಪವನ್​ ಕುಮಾರ್ ಈ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಈವರೆಗೂ ಜಾವೇದ್​ ಮೇಲೆ ಎಫ್​ಐಆರ್ ದಾಖಲು ಆಗಿಲ್ಲ ಎಂದು ಹೇಳಿದ್ದಾರೆ.

ಇದು ಅಲ್ಲದೇ ದೆಹಲಿ ಹಾಗೂ ಮುಂಬೈನಲ್ಲಿರುವ ಅವರ ಆಸ್ತಿ ಕುರಿತು ಪೊಲೀಸ್ ತಂಡ ತನಿಖೆ ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries