ಕಾಸರಗೋಡು: ಜಿಲ್ಲೆಯಲ್ಲಿ ಜಲ ಶಕ್ತಿ ಅಭಿಯಾನ 2025 ರ ಚಟುವಟಿಕೆಗಳನ್ನು ನಿರ್ಣಯಿಸಲು ಕೇಂದ್ರ ತಂಡವು ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪನತ್ತಡಿಯಲ್ಲಿರುವ ಚೀರಂಗಡವು ಚೆಕ್ ಡ್ಯಾಂ, ಚಿತ್ತಾರಿಮಲ ಸ್ಪ್ರಿಂಗ್ ಶೆಡ್ ಯೋಜನೆ, ಕಯ್ಯೂರು ಚೀಮೇನಿಯ ಪಡುತ್ತಕುಲಂ, ಜೆಜೆಎಂ ಸೈಟ್, ಬಲಾಲ್ ಕಲ್ಲಂಚಿರ ವಾಟರ್ ಶೆಡ್ ಮತ್ತು ತ್ರಿಕರಿಪುರದಲ್ಲಿ ಕೆರೆಗಳ ನವೀಕರಣ ಕಾರ್ಯ ಪೂರ್ಣಗೊಳ್ಳುತ್ತಿರುವ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ ನೀಡಿತು.
ಜಿಲ್ಲಾ ನೋಡಲ್ ಅಧಿಕಾರಿ, ಅಂತರ್ಜಲ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅರುಣ್ ದಾಸ್, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಎಂಜಿನಿಯರ್ ಸದ ಅಬ್ದುಲ್‍ರೆಹಮಾನ್, ಸಿಆರ್‍ಡಿ ಪ್ರತಿನಿಧಿ ಡಾ. ವಿ. ಶಶಿಕುಮಾರ್, ವಿಭಾಗೀಯ ಅರಣ್ಯ ಅಧಿಕಾರಿ ಜೋಸ್ ಮ್ಯಾಥ್ಯೂ, ಬಡತನ ನಿರ್ಮೂಲನಾ ಇಲಾಖೆಯ ಪ್ರಭಾರ ನಿರ್ದೇಶಕ ಟಿ.ಟಿ.ಸುರೇಂದ್ರನ್ ಮತ್ತು ವಿವಿಧ ಇಲಾಖೆಗಳ ಇತರ ಪ್ರತಿನಿಧಿಗಳು ತಂಡದ ಜತೆಗಿದ್ದರು.





