HEALTH TIPS

ಮಾರಿಯಾ ಕೊರಿನಾ ಮಚಾದೊಗೆ ಒಲಿದ ‌ನೊಬೆಲ್‌ ಶಾಂತಿ ಪ್ರಶಸ್ತಿ: ಯಾರಿವರು?

ಸ್ಕ್ಯಾನ್ ಪ್ರಾಸ್ ಸಿಕೊ: :ವೆನೆಜುವೆಲಾದಲ್ಲಿ ಪ್ರಜಾಪ್ರಭುಲತ್ವವನ್ನು ಮರುಸ್ಥಾಪಿಸಲುಲು ಮತ್ತು ಅಲ್ಲಿನ ಜನರ ಹಕ್ಕುಗಳಿಗಾಗಿ ದಣಿವರಿಯದೆ ಹೋರಾಡಿದ ಮಾರಿಯಾ ಕೊರಿನಾ ಮಚಾದೊ ಅವರನ್ನು 2025ರ ನೊಬೆಲ್‌ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಾರ್ವೆ ಸಮಿತಿ ಸೋಮವಾರ ಪ್ರಕಟಿಸಿದೆ.

2025ರ ನೊಬೆಲ್ ಶಾಂತಿ ಪ್ರಶಸ್ತಿಯು ಶಾಂತಿ ಮತ್ತು ಬದ್ಧತೆಯ ಪ್ರತಿಪಾದಕಿ, ಹರಡುತ್ತಿರುವ ಕತ್ತಲೆಯ ನಡುವೆ ಪ್ರಜಾಪ್ರಭುತ್ವದ ಜ್ವಾಲೆಯನ್ನು ಪಸರಿಸುತ್ತಿರುವ ಮಹಿಳೆಗೆ ಸಲ್ಲುತ್ತದೆ ಎಂದು ಸಮಿತಿ ಹೇಳಿದೆ.

ಪ್ರಜಾಪ್ರಭುತ್ವ ಪರ ಗುಂಪಿನ ಸಪೋಲಿಟಿಕ್ಸ್‌ಮೇಟ್‌ನ (Supoliticsmate) ಸಂಸ್ಥಾಪಕಿಯಾದ ಅವರು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಶಾಂತಿಯುತ ಪರಿವರ್ತನೆಗೆ ಶ್ರಮಿಸಿದ್ದಾರೆ. ಗುಂಡುಗಳ ಬದಲು ಮತಪತ್ರ (ballots over bullets) ಆಯ್ಕೆ ಎಂದು ಪ್ರತಿಪಾದಿಸಿದ್ದ ಅವರು, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ದೀರ್ಘಕಾಲ ಪ್ರಚಾರ ಮಾಡಿದ್ದಾರೆ.

ದಶಕಗಳಿಂದ ಸರ್ವಾಧಿಕಾರಿ ಆಡಳಿತವನ್ನು ಧಿಕ್ಕರಿಸಿ, ಬೆದರಿಕೆ, ಬಂಧನ ಮತ್ತು ಕಿರುಕುಳವನ್ನು ಅನುಭವಿಸಿದ್ದಾರೆ. ನಿರಂತರ ಬೆದರಿಕೆ ಹಾಗೂ ಅಪಾಯವನ್ನು ಮೆಟ್ಟಿನಿಂತ ಅವರು ವೆನೆಜುವೆಲಾದಲ್ಲಿ ಶಾಂತಿ ನೆಲೆಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ಸಮಿತಿ ಹೇಳಿದೆ.

ಮಚಾದೊ ಅವರಿಗೆ ಪ್ರಶಸ್ತಿ ಒಲಿದಿದ್ದು ಏಕೆ?

  • ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ತಾವು ನೊಬೆಲ್‌ ಪ್ರಶಸ್ತಿಯ ಅರ್ಹ ಆಯ್ಕೆ ಎಂದು ಪದೇ ಪದೇ ಹೇಳಿಕೊಂಡಿದ್ದರ ಹೊರತಾಗಿಯೂ. ನಾರ್ವೇಜಿಯನ್ ನೊಬೆಲ್ ಸಮಿತಿ ಮಚಾದೊ ಅವರನ್ನು ಆಯ್ಕೆ ಮಾಡಿದೆ. ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ..

  • ಮಚಾದೊ ಅವರನ್ನು ಒಂದು ಕಾಲದಲ್ಲಿ ತೀವ್ರವಾಗಿ ವಿಭಜನೆಯಾಗಿದ್ದ ವೆನಿಜುವೆಲಾದ ರಾಜಕೀಯ ವಿರೋಧ ಪಕ್ಷದಲ್ಲಿ ಪ್ರಮುಖ ವ್ಯಕ್ತಿ ಎಂದು ಸಮಿತಿ ಅಧ್ಯಕ್ಷ ಜೋರ್ಗೆನ್ ವಾಟ್ನೆ ಫ್ರೈಡ್ನೆಸ್ ಅವರು ಶ್ಲಾಘಿಸಿದ್ದಾರೆ.

  • ಮಾಚಾದೊ ಅವರ ನೇತೃತ್ವದಲ್ಲಿ ವಿರೋಧ ಪಕ್ಷದವರು ವೆನಿಜುವೆಲಾದಲ್ಲಿ ಸ್ವತಂತ್ರ ಚುನಾವಣೆಗಳು ಮತ್ತು ಪ್ರಾತಿನಿಧಿಕ ಸರ್ಕಾರದ ಬೇಡಿಕೆಯಲ್ಲಿ ಸಾಮಾನ್ಯ ನೆಲೆಯನ್ನು ಕಂಡುಕೊಂಡರು ಎಂದು ಸಮಿತಿ ಹೇಳಿದೆ.

  • ವೆನೆಜುವೆಲಾದ ಜನರಿಗಾಗಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಉತ್ತೇಜಿಸುವ ಅವರ ದಣಿವರಿಯದ ಕೆಲಸ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಪರಿವರ್ತನೆಗಾಗಿ ಅವರ ಹೋರಾಟವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದೂ ಸಮಿತಿ ತಿಳಿಸಿದೆ.

ಮಚಾದೊ ಅವರ ಬಗ್ಗೆ

ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯ ಕೇಂದ್ರ ವ್ಯಕ್ತಿಯಾದ ಅವರು ಪ್ಯಾರಿಸ್ಕಾ ಲ್ಯಾಟಿನ್ ಅಮೆರಿಕದಲ್ಲಿ ನಾಗರಿಕ ಹಕ್ಕಿನ ಹೋರಾಟದ ಪ್ರಮುಖ ಶಕ್ತಿಯಾಗಿದ್ದಾರೆ. ಕೈಗಾರಿಕಾ ಎಂಜಿನಿಯರ್ ಆಗಿರುವ ಅವರು, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಾಗಿದ್ದರು. 2011 ರಿಂದ 2014 ರವರೆಗೆ ರಾಷ್ಟ್ರೀಯ ವಿಧಾನಸಭೆಯ ಚುನಾಯಿತ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

2024ರ ಚುನಾವಣೆಗೆ ಮಚಾದೊ ಅವರು ವಿರೋಧ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು. ಆದರೆ ಆಡಳಿತವು ಅವರ ಉಮೇದುವಾರಿಕೆಯನ್ನು ನಿರ್ಬಂಧಿಸಿತ್ತು. ಬಳಿಕ ಅವರು, ವಿರೋಧ ಪಕ್ಷದ ಅಭ್ಯರ್ಥಿ ಎಡ್ಮುಂಡೊ ಗೊನ್ಜಾಲೆಜ್ ಉರುಟಿಯಾ ಅವರನ್ನು ಬೆಂಬಲಿಸಿದ್ದರು.

ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರಿ ಪೈಪೋಟಿ ಇತ್ತು. ಒಟ್ಟು 338 ಪ್ರಮುಖರು ಹಾಗೂ ಸಂಸ್ಥೆಗಳು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮಗೆ ಈ ಪ್ರಶಸ್ತಿ ಸಿಗಬೇಕು ಎಂದು ಪದೇ ಪದೇ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೂ, ಸಮಿತಿಯು ಮಚಾದೊ ಅವರ ಹೋರಾಟವನ್ನು ಪ್ರಮುಖವಾಗಿ ಪರಿಗಣಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries