ಪೆರ್ಲ: ಅತ್ಯುತ್ತಮ ನಿರ್ವಹಣೆಗಾಗಿ ಕೇರಳ ಬ್ಯಾಂಕ್ ಕೊಡಮಾಡುವ 'ಎಕ್ಸಲೆನ್ಸ್ ಅವಾರ್ಡ್'ಗೆ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಆಯ್ಕೆಯಾಘಿದ್ದು, ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಪ್ರದನ ಮಾಡಲಾಯಿತು
ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷೆ ಶ್ಯಾಮಲಾ ಆರ್. ಭಟ್ ಅವರು ಕೇರಳ ಬ್ಯಾಂಕ್ ಅಧಿಕಾರಿಗಳಿಂದ ಪ್ರಶಸ್ತಿ ಪಡೆದುಕೊಂಡರು. ಬ್ಯಾಂಕಿನ ನಿರ್ದೇಶಕರಾದವೆಂಕಟ್ರಮಣ ಭಟ್ ವೈ, ನಾರಾಯಣ ಪ್ರಸಾದ್ ಹಾಗೂ ಬ್ಯಾಂಕಿನ ಕಾರ್ಯದರ್ಶಿ ಪ್ರಭಾಕರ ಕೆ.ಪಿ ಉಪಸ್ಥಿತರಿದ್ದರು. ಕೇರಳ ರಾಜ್ಯ ಸಹಕಾರಿ ಇಲಾಖೆಯ ವರ್ಗೀಕರಣ ಪ್ರಕಾರ ಪೆರ್ಲ ಸೇವಾ ಸಹಕರಿ ಬ್ಯಾಂಕು ಪ್ರಥಮ ದರ್ಜೆ ಸೂಪರ್ ಗ್ರೇಡ್ ಬ್ಯಾಂಕ್ ಆಗಿ ಉನ್ನತಿಯನ್ನು ಪಡೆದಿದೆ.





