ಕಾಸರಗೋಡು: ಬಾಲಭವನ ಆಂಗ್ಲಮಾಧ್ಯಮ ಶಾಲಾ ಕಲೋತ್ಸವ ಶಾಲಾ ಸಭಾಂಗಣದಲ್ಲಿ ಜರುಗಿತು. ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ಜಿಲ್ಲಾ ನ್ಯಾಯಾಧೀಶ ಕೆ.ಸಂತೋಷ್ ಕುಮಾರ್ ಕಲೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಕಲೋತ್ಸವಗಳು ಸಹಕಾರಿಯಾಗಿರುವುದಾಗಿ ತಿಳಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ ಪೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶೈಕ್ಷಣಿಕ ಸಲಹೆಗಾರ ಡಾ. ವೆಂಕಟ್ರಮಣ ಹೊಳ್ಳ ಮತ್ತು ಪಿಟಿಎ ಉಪಾಧ್ಯಕ್ಷ ಮುಹಮ್ಮದ್ ಅಸ್ಲಂ ಉಪಸ್ಥಿತರಿದ್ದರು.
ಪಿಟಿಎ ಕೋಶಾಧಿಕಾರಿ ಎನ್.ಬಿ. ಪ್ರಕಾಶನ್, ಮದರ್ ಪಿಟಿಎ ಅಧ್ಯಕ್ಷೆ ರೂಪಕಲಾ, ಪಿಟಿಎ ಸದಸ್ಯರು, ಶಿಕ್ಷಕರು ಮತ್ತು ಪೆÇೀಷಕರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಲೀಲಾವತಿ ಕೆ. ನಾಯರ್ ಸ್ವಾಗತಿಸಿದರು. ಶಿಕ್ಷಕಿ ರಾಧಾಮಣಿ ವಂದಿಸಿದರು.




