ಕಾಸರಗೋಡು: ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಗುರುವರ್ಯ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಗಳಿಂದ ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿನ ನಾಗರಕಟ್ಟೆಯಲ್ಲಿ ಸ್ಥಾಪಿಸಲಾಗಿರುವ "ಶ್ರೀ ಶಾರದಾ ಭಜನಾಶ್ರಮ'ದ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಶೃಂಗೇರಿ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿಯನ್ನು ಶೃಂಗೇರಿಯಲ್ಲಿ ಭೇಟಿಮಾಡಿದರು. ನಾಗರಕಟ್ಟೆಯಲ್ಲಿ ನಿರ್ಮಾಣವಾಗಲಿರುವ ನೂತನ ನಾಗರಕಟ್ಟೆ, ರಕ್ತೇಶ್ವರಿ ಕಟ್ಟೆ ಪುನ:ನಿರ್ಮಾಣ ಹಾಗೂ ಡಿಸೆಂಬರ್ ತಿಂಗಳ ನಾಲ್ಕು, ಐದನೇ ತಾರೀಕಿಗೆ ನಡೆಯುವ ಬ್ರಹ್ಮ ಕಲಶ ಪ್ರಯುಕ್ತ, ಈ ಭೇಟಿ ಆಯೋಜಿಸಲಾಗಿತ್ತು.
ಶೃಂಗೇರಿ ಶ್ರೀಗಳಿಗೆ ಪಾದಪೂಜೆ, ವಸ್ತ್ರ ಸಂಹಿತೆಯೊಂದಿಗೆ ನೀಡಿ ಪರಮ ಅನುಗ್ರಹ ವನ್ನು ಪಡೆಯಲಾಯಿತು. ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮ-ನೂತನ ನಾಗನಕಟ್ಟೆ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಕೆ ನಿರಂಜನ್ ಕೊರಕ್ಕೊಡು, ಉಪಾಧ್ಯಕ್ಷ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್, ಭಜನಾಶ್ರಮ ಪದಾಧಿಕಾರಿ ನವೀನ್ ನಾಯ್ಕ್ ನಾಗರಕಟ್ಟೆ, ಕಾರ್ತಿಕ್ ಕಾಸರಗೋಡು, ಸಂಧ್ಯಾರಾಣಿ ಟೀಚರ್ ಗುರು ವಂದನೆ ನಡೆಸಿ ಶೃಂಗೇರಿ ಶ್ರೀ ಶಾರದಾ ಮಾತೆಗೆ ಪೂಜೆ ಸಲ್ಲಿಸಿದರು.


