ಕಾಸರಗೋಡು: ಮಾದಕದ್ರವ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ನೀಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಸನಿಹದ ಮೂಕಂಪಾರೆ ನಿವಾಸಿ ಅಲೆಕ್ಸ್ ಚಾಕೋ ಹಾಗೂ ಹೊಸದುರ್ಗ ಪಡನ್ನಕ್ಕಾಡ್ ನಿವಾಸಿ ವಿಷ್ಣು ಪಿ ಬಂಧಿತರು. ಇವರ ವಿರುದ್ಧ ಎನ್‍ಡಿಪಿಎಸ್ ಪಿಟ್ ಆ್ಯಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದ್ದು, ಇಬ್ಬರನ್ನೂ ತಿರುವನಂತಪುರದ ಪೂಜಾಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ನಿರ್ದೇಶ ಪ್ರಕಾರೆಎಸ್‍ಪಿ ಡಾ. ನಂದಗೋಪನ್ , ಡಿವೈಎಸ್ಪಿಸಿ.ಕೆ ಸುನಿಲ್ ಕುಮಾರ್ ಮೇಲ್ನೋಟದಲ್ಲಿ ಬದಿಯಡ್ಕ ಹಾಗೂ ನೀಲೇಶ್ವರ ಠಾಣೆ ಎಸ್.ಐಗಳು ಕಾರ್ಯಾಚರಣೆ ನಡೆಸಿದ್ದಾರೆ.




