HEALTH TIPS

ಗಾಝಾ ಮೇಲಿನ ಯುದ್ಧವನ್ನು ಇಸ್ರೇಲ್‌ ತಕ್ಷಣವೇ ನಿಲ್ಲಿಸಬೇಕು : ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೊ ಗುಟೆರಸ್

ನ್ಯೂಯಾರ್ಕ್: ಗಾಝಾ, ಇಸ್ರೇಲ್ ಹಾಗೂ ಇತರ ಪ್ರದೇಶಗಳಲ್ಲಿ ಯುದ್ಧಗಳನ್ನು ತಕ್ಷಣವೇ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಆಗ್ರಹಿಸಿದ್ದು ನಾಗರಿಕರ ಜೀವನ ಮತ್ತು ಭವಿಷ್ಯಕ್ಕೆ ಮಾರಕವಾಗುವ ಕ್ರಮಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

2023ರ ಅಕ್ಟೋಬರ್ 7ರಂದು ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ದಾಳಿಯ ಎರಡನೇ ವಾರ್ಷಿಕ ದಿನದ ಸಂದರ್ಭ ಮಾತನಾಡಿದ ಅವರು `ಗಾಝಾದಲ್ಲಿರುವ ಮಾನವೀಯ ದುರಂತದ ಪರಿಸ್ಥಿತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಈ ಸಂಕಷ್ಟವನ್ನು ಆದಷ್ಟು ಶೀಘ್ರವಾಗಿ ಕೊನೆಗೊಳಿಸಬೇಕಾಗಿದೆ' ಎಂದರು.

ಎರಡು ವರ್ಷಗಳಿಂದ ಗಾಝಾದಲ್ಲಿ ಬಂಧನದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು. ಶಾಶ್ವತ ಕದನ ವಿರಾಮದ ಜೊತೆಗೆ ಮತ್ತಷ್ಟು ರಕ್ತಪಾತವನ್ನು ತಡೆಗಟ್ಟುವ ವಿಶ್ವಾಸಾರ್ಹ ರಾಜಕೀಯ ಪ್ರಕ್ರಿಯೆಗೆ ಚಾಲನೆ ದೊರಕಬೇಕಿದೆ. ಈ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿರಿಸಿದ ಇತ್ತೀಚಿನ ಪ್ರಸ್ತಾಪ ಸೃಷ್ಠಿಸಿರುವ ಅವಕಾಶವನ್ನು ಬಳಸಿಕೊಂಡು ಈ ದುರಂತ ಸಂಘರ್ಷವನ್ನು ಅಂತ್ಯಗೊಳಿಸಬೇಕಿದೆ. ಎರಡು ವರ್ಷಗಳ ಆಘಾತದ ಬಳಿಕ ನಾವು ಭರವಸೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಹಂತದಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಯಾವತ್ತೂ ಗೌರವಿಸಬೇಕಿದೆ ಎಂದ ಗುಟೆರಸ್, ಎರಡು ವರ್ಷಗಳ ಆಘಾತದ ಬಳಿಕ ಈಗ ಭರವಸೆಯನ್ನು ಆಯ್ಕೆ ಮಾಡುವ ಸಮಯ ಬಂದಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries