ಮಂಜೇಶ್ವರ: ಮಂಜೇಶ್ವರ ಸಿರಾಜುಲ್ ಹುದಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಇಬ್ರಾಹಿಂ ಶಾಹಿದ್ ಎಚ್ 2005-26 ಶೈಕ್ಷಣಿಕ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ವೆಬ್‍ಪೇಜ್ ಡಿಸೈನಿಂಗ್ ವಿಭಾಗದಲ್ಲಿ ಜಯಗಳಿಸಿ ಇದೀಗ ಕೇರಳ ರಾಜ್ಯ ಮಟ್ಟದ ಐಟಿ ಫೇರ್ ಗೆ ಆಯ್ಕೆಗೊಂಡಿದ್ದಾನೆ.
ಮಂಜೇಶ್ವರ ಚೌಕಿ ನಿವಾಸಿ, ಸಮಾಜ ಸೇವಕ ಹಾಗೂ ದೃಶ್ಯ ಮಾಧ್ಯಮ ಕ್ಯಾಮರಾಮ್ಯಾನ್ ಮೊಹಮ್ಮದ್ ಹನೀಫ್ ಶಾರ್ಜಾ ಹಾಗೂ ಕದೀಜಾ ದಂಪತಿಗಳ ಪುತ್ರನಾದ ಇಬ್ರಾಹಿಂ ಶಾಹಿದ್, ಬಾಲ್ಯದಿಂದಲೇ ತಾಂತ್ರಿಕ ಕ್ಷೇತ್ರದ ಮೇಲೆ ಆಸಕ್ತಿ ತೋರಿದ್ದಾನೆ. ಅವನ ಪರಿಶ್ರಮ, ಕ್ರಿಯಾಶೀಲತೆ ಮತ್ತು ತಂತ್ರಜ್ಞಾನಪ್ರೀತಿ ಈ ಸಾಧನೆಗೆ ಕಾರಣವಾಗಿದೆ.
ಮಂಜೇಶ್ವರ ಪಂಚಾಯತಿ ಮಚ್ಚಂಪಾಡಿ ಮುಸ್ಲಿಂ ಲೀಗ್ ಶಾಖೆಯ ವತಿಯಿಂದ ವಿದ್ಯಾರ್ಥಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಿ. ಎಚ್ ಅಬ್ದುಲ್ ಹಮೀದ್ ಹಾಜಿ, ಹುಸೈನ್ ಮಚ್ಚಂಪ್ಪಾಡಿ, ಹನೀಫ್, ಮಜೀದ್, ರಜಾಕ್, ಮನ್ಸೂರ್, ಹನೀಫ್ ಅಬೂಬಕ್ಕರ್, ಆಸಿಫ್ ಮೊದಲಾದವರು ಸನ್ಮಾನ ಸಮಾರಂಭಕ್ಕೆ ನೇತೃತ್ವ ನೀಡಿದರು
ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಹಪಾಠಿಗಳು ಇಬ್ರಾಹಿಂ ಶಾಹಿದ್‍ನ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಅವರು ರಾಜ್ಯ ಮಟ್ಟದಲ್ಲಿಯೂ ಅದೇ ಉತ್ಸಾಹ ಮತ್ತು ಪ್ರತಿಭೆಯಿಂದ ಕೀರ್ತಿ ತಂದುಕೊಡುವರು ಎಂಬ ವಿಶ್ವಾಸ ಎಲ್ಲರಲ್ಲೂ ವ್ಯಕ್ತವಾಗಿದೆ. ಇಬ್ರಾಹಿಂ ಶಾಹಿದ್ ಗೆ ವ್ಯಾಪಕ ಪ್ರಶಂಶೆಗಳು ಹರಿದು ಬರುತ್ತಿದೆ.

.jpg)
